Bengaluru, ಫೆಬ್ರವರಿ 4 -- ಪುರುಷರ ಚರ್ಮವು ಸಾಮಾನ್ಯವಾಗಿ ಒರಟಾಗಿದ್ದು, ಅವರು ಚರ್ಮದ ಆರೈಕೆ, ಪೋಷಣೆ ಮಾಡುವುದು, ಕಾಳಜಿ ವಹಿಸುವುದು ತೀರಾ ಕಡಿಮೆ. ಹೀಗಾಗಿ ಕಲ್ಮಶ, ಧೂಳು ಸೇರಿದಂತೆ ಇನ್ನಿತರ ಕಣಗಳು ತ್ವಚೆ ಸೇರಿಕೊಂಡು ಮೊಡವೆಗಳು ಮೂಡುತ್ತವೆ. ಇದರಿಂದ ತ್ವಚೆಯ ಕಾಂತಿ ಕಳೆಗುಂದುತ್ತದೆ. ಇದನ್ನು ನಿವಾರಣೆ ಮಾಡಲು ಪುರುಷರ ತ್ವಚೆಗೆ ಅನುಗುಣವಾಗಿ ಕೊರಿಯನ್ ಫೇಸ್ ಮಾಸ್ಕ್ ಟ್ರೆಂಡಿಂಗ್ ಅಲ್ಲಿದ್ದು ಅವುಗಳ ಬಳಕೆ ಹೇಗೆ ಎಂಬುದರ ಮಾಹಿತಿಯನ್ನು ಇಲ್ಲಿ ನೋಡೋಣ.

ಮೊಡವೆ, ಕಲೆ, ಕಾಂತಿ ಕಳೆಗುಂದುವುದು ಇಂದಿನ ದಿನಗಳಲ್ಲಿ ಪುರುಷರಲ್ಲೂ ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆಯಾಗಿದ್ದು, ಇದನ್ನು ಬಗೆಹರಿಸಲು ಹಲವಾರು ರೀತಿಯ ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ ನಿಮ್ಮ ತ್ವಚ್ಚೆಗೆ ಅನುಗುಣವಾಗಿ ಕೋರಿಯನ್ ಫೇಸ್ ಮಾಸ್ಕ್ ಬಳಕೆಯ ಕುರಿತು ನಿಮಗೆ ತಿಳಿದಿದೆಯೇ?

ಹೌದು, ಕೆ-ಬ್ಯೂಟಿ ಎಂದೇ ಪ್ರಪಂಚದಾದ್ಯಂತ ಜನಪ್ರಿಯಗೊಳುತ್ತಿರುವ ಕೊರಿಯನ್ ಫೇಸ್ ಮಾಸ್ಕ್, ಆಧುನಿಕ ಪದಾರ್ಥಗಳೊಂದಿಗೆ ತಮ್ಮದೇ ಶೈಲಿಯಲ್ಲಿ ಸಾಂಪ್ರದಾಯಿಕ ಪದಾರ್ಥ...