Koppal, ಫೆಬ್ರವರಿ 14 -- ಬೆಂಗಳೂರು: ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ಎರಡು ವಾರದ ಹಿಂದೆಯಷ್ಟೇ ತೋಳವೊಂದು ಎಂಟು ಮರಿಗಳಿಗೆ ಜನ್ಮ ನೀಡಿದ ಖುಷಿಯ ನಡುವೆಯೇ ಮತ್ತೊಂದು ತೋಳ ಐದು ಮರಿಗಳಿಗೆ ಜನ್ಮ ನೀಡಿದ್ದು, ಸಂರಕ್ಷಿತ ತೋಳ ಧಾಮದಲ್ಲಿ ಅಳಿವಿನಂಚಿನಲ್ಲಿರುವ ಬೂದು ತೋಳ (ಇಂಡಿಯನ್ ಗ್ರೇ ಉಲ್ಫ್)ದ ಸಂತತಿಯಲ್ಲಿ ಹೆಚ್ಚಳವಾಗುತ್ತಿದೆ. ಕರ್ನಾಟಕ ಅರಣ್ಯ ಇಲಾಖೆಯು ಕೊಪ್ಪಳ ಭಾಗದಲ್ಲಿರುವ ತೋಳಗಳ ಪುನರುತ್ಥಾನಕ್ಕೆ ಒತ್ತು ನೀಡುತ್ತಿದೆ. ಈಗಾಗಲೇ ಕೊಪ್ಪಳದ ಬಂಕಾಪುರ ಧಾಮದಲ್ಲಿ ನೆಲೆ ಕಂಡುಕೊಂಡಿರುವ ತೋಳಗಳಿಗೆ ಪ್ರತ್ಯೇಕ ಧಾಮ ಘೋಷಿಸಿ ಸಂರಕ್ಷಣೆ ಕೈಗೊಳ್ಳಲಾಗಿದೆ. ಇದರ ಫಲವಾಗಿ ಸಂತಾನಾಭಿವೃದ್ದಿ ಯಶಸ್ವಿಯಾಗಿ ಆಗುತ್ತಿದೆ.

ಗಂಗಾವತಿ ಅರಣ್ಯ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿರುವ ಸುಮಾರು 332 ಹೆಕ್ಟರ್ ಬಂಕಾಪೂರ ತೋಳ ಧಾಮದ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾಳಜಿ ವಹಿಸಿದ್ದು, ಇದು ವನ್ಯಜೀವಿಗಳಿಗೆ ಸುರಕ್ಷಿತ ತಾಣವಾಗಿದೆ. ತೋಳಗಳ ಸಂತತಿಯಲ್ಲಿ ಹೆಚ್ಚಳಕ್ಕೂ ಇದೆ ಕಾರಣವಾಗಿದೆ ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪ...