Kodagu, ಫೆಬ್ರವರಿ 1 -- Kodagu Tourism website: ಕರ್ನಾಟಕದ ಕಾಶ್ಮೀರ ಕೊಡಗಿಗೆ ಪ್ರವಾಸಕ್ಕೆ ಬರುವವ್ ಸಂಖ್ಯೆ ಕಡಿಮೆ ಏನಿಲ್ಲ. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಹಾಗೂ ಉತ್ತರಭಾರತದ ರಾಜ್ಯಗಳಿಂದಲೂ ವರ್ಷವಿಡೀ ಪ್ರವಾಸಿಗರು ಕೊಡಗಿಗೆ ಬರುವುದುಂಟು. ಇಲ್ಲಿನ ಹವಾಮಾನ, ಬೆಟ್ಟಗುಡ್ಡಗಳು, ಅರಣ್ಯ, ಹಸಿರು ವಾತಾವರಣ ಇದಕ್ಕೆ ಕಾರಣ. ಪ್ರವಾಸಿಗರು ಕೊಡಗಿಗೆ ಬಂದರೆ ನಿಖರ ಮಾಹಿತಿಯನ್ನು ನೀಡುವ ಪ್ರವಾಸೋದ್ಯಮ ವೆಬ್‌ಸೈಟ್‌ ಇರಲಿಲ್ಲ. ಇದರಿಂದ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯೇ ಸಮಗ್ರ ಮಾಹಿತಿ ನೀಡುವ ವೆಬ್‌ಸೈಟ್‌ ರೂಪಿಸಿದೆ. ಕೊಡಗು ಪ್ರಯಾಣ ಅನುಭವಗಳಿಗಾಗಿ ವಿಶ್ವಾಸಾರ್ಹ ಮೂಲ. ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‍ಸೈಟ್ explorekodagu.com ಅನ್ನು ಜನರ ಬಳಕೆಗೆ ಸಮರ್ಪಣೆ ಮಾಡಲಾಗಿದೆ.

ಕೊಡಗು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಕೊಡಗು ಡಿಸಿ ವೆಂಕಟರಾಜಾ ಅವರು ಜಿಲ್ಲೆಯ ಮುಖಾಂತರ ಕೊಡಗು ಪ್ರವಾಸೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕ...