Kodagu, ಏಪ್ರಿಲ್ 4 -- Kodagu News: ವಾಟ್ಸ್ ಆ್ಯಪ್‌ ಗ್ರೂಪ್‌ನಲ್ಲಿ ಹಾಕಿದ್ದ ಸಂದೇಶದಿಂದ ಬಂಧನಕ್ಕೆ ಒಳಗಾಗಿದ್ದ ಕೊಡಗಿನ ಯುವಕನೊಬ್ಬ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಳೆದ ಜನವರಿ ತಿಂಗಳಲ್ಲಿ " ಕೊಡಗಿನ ಸಮಸ್ಯೆಗಳು ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಯಾರೋ ಶೇರ್ ಮಾಡಿದ ಪೋಸ್ಟ್ ವೊಂದರ ಹಿನ್ನೆಲೆ ತನ್ನ ತೇಜೋವಧೆ ಆಗಿದೆ ಎಂದು ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ. ಸೋಮವಾರಪೇಟೆ ಗೋಣಿಮರೂರು‌ ಮೂಲದ ವಿನಯ್ ಸೋಮಯ್ಯ (39) ಎಂಬುವವರೇ ಬೆಂಗಳೂರಿನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡವರು. ಈ ಕುರಿತು ಬೆಂಗಳೂರಿನಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಕೊಡಗಿನ ಸಮಸ್ಯೆಗಳು ಎಂಬ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ಆಗಿದ್ದ ವಿನಯ್ ಜಿಲ್ಲೆಯ ಹಲವು ವಿಷಯಗಳ ಕುರಿತು ನಿರಂತರವಾಗಿ ಚರ್ಚೆ ಮಾಡುತ್ತಿದ್ದರು. ಇದಕ್ಕೆ ಗ್ರೂಪ್‌ನಲ್ಲಿದ್ದವರೂ ಪ್ರತಿಕ್ರಿಯಿಸುತ್ತಿದ್ದರು. ಮೂರು ತಿಂಗಳ ಹಿಂದೆ ವಾಟ್ಸಾಪ್ ಗ್ರೂ...