Madikeri, ಫೆಬ್ರವರಿ 17 -- Kodagu News: ದೊಡ್ಡ ದೊಡ್ಡ ಅಂಗಡಿ, ಮನೆಗಳಿಗೆ ಕನ್ನ ಹಾಕಿರುವವರ ಬಗ್ಗೆ ಕೇಳಿದ್ದೀರಿ. ಬ್ಯಾಂಕ್‌, ಎಟಿಎಂಗಳಿಗೆ ನುಗ್ಗಿ ದರೋಡೆ ಮಾಡಿರುವವರನ್ನು ನೋಡಿದ್ದೀರಿ. ಆದರೆ ಇಲ್ಲಿ ಕಳ್ಳರು ನುಗ್ಗಿರುವುದು ಅಂಚೆ ಕಚೇರಿಗೆ. ಅದೂ ಹಳ್ಳಿಯೊಂದರ ಪುಟ್ಟ ಅಂಚೆ ಕಚೇರಿಗೆ. ಅವರು ಅಲ್ಲಿ ಏನೂ ಸಿಗದೇ ಇದ್ದಾಗ ಹೊತ್ತೊಯ್ದಿದ್ದು ಕೆಲವು ಗ್ರಾಹಕರ ಪಾಸ್‌ಪುಸ್ತಕಗಳು ಹಾಗೂ ಅಂಚೆ ಸ್ಟಾಂಪ್‌ ಹಾಗೂ ಖಜಾನೆ ಬಾಕ್ಸ್‌ ಅನ್ನು. ಕೊಡಗಿನಲ್ಲಿ ಅಂಚೆ ಕಚೇರಿಯೊಂದರಲ್ಲಿ ಕಳ್ಳತನ ನಡೆಸಿ ಸಿಕ್ಕಿ ಬಿದ್ದಿರುವ ಪ್ರಕರಣವಿದು. ಎರಡೂವರೆ ತಿಂಗಳ ಹಿಂದೆ ನಡೆದಿದ್ದ ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮದ ಅಂಚೆ ಕಚೇರಿ ಕಳ್ಳತನ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ಆಗ ಅವರು ಕದ್ದಿರುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಟ್ಟಂಗಾಲದಲ್ಲಿ 2024ರ ನವೆಂಬರ್‌ 30ರಂದು ಕಳ್ಳತನ ಪ್ರಕರಣ ನಡೆದಿತ್ತು. ಅದು ಗ್ರಾಮದ ಅಂಚೆ ಕಚೇರ...