Madikeri, ಫೆಬ್ರವರಿ 25 -- ಕರ್ನಾಟಕದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ತನ್ನ ವಿಶಿಷ್ಟ ಸಂಸ್ಕೃತಿಯಿಂದ ಗುರುತಿಸಿಕೊಳ್ಳುವ ಕೊಡಗು ಇನ್ನೊಂದು ಕಾರಣಕ್ಕೂ ಕುಖ್ಯಾತಿಯನ್ನು ಪಡೆಯುತ್ತಿದೆ. ಕೊಡಗಿನಲ್ಲಿ ಅಪ್ರಾಪ್ತ ಬಾಲೆಯರು ಗರ್ಭಿಣಿಯರಾಗಿ ಮಕ್ಕಳನ್ನು ಹೆರುವ ಪ್ರಕರಣಗಳು ಸದ್ದಿಲ್ಲದೇ ಏರಿಕೆ ಕಂಡಿವೆ. ಕಳೆದ ವರ್ಷದ ಒಂಬತ್ತು ತಿಂಗಳಿನಲ್ಲಿ ಬರೀ ಒಂಬತ್ತು ತಿಂಗಳ ಅಂತರದಲ್ಲಿ 30 ಮಕ್ಕಳು ಗರ್ಭಿಣಿಯಾಗಿದ್ದಾರೆ. ಇದರಲ್ಲಿ 14 ಅಪ್ರಾಪ್ತೆಯರು ಹೆರಿಗೆ ಆಗಿ ತಾವು ಮಕ್ಕಳಾಗಿ ಆಡಿಕೊಂಡು ಇರಬೇಕಾದ ಕಾಲದಲ್ಲಿ ಮಕ್ಕಳೊಂದಿಗೆ ಕಳೆಯುವ ಸನ್ನಿವೇಶ ಎದುರಾಗಿದೆ. ಸರ್ಕಾರ ಮದುವೆ ವಯಸ್ಸನ್ನು ಹೆಚ್ಚಿಸಿ ಶಿಕ್ಷಣದ ಮೂಲಕ ಬದಲಾವಣೆ ತರುವ ಪ್ರಯತ್ನವನ್ನು ಗಂಭೀರವಾಗಿ ಮಾಡುತ್ತಿದ್ದರೂ ಮತ್ತೊಂದು ಕಡೆ ಇಂತಹ ಪ್ರಕರಣಗಳಲ್ಲಿ ಏರಿಕೆ ಕಂಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಕೊಡಗು ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಕ್ಕಳ ರಕ್ಷಣಾ ವಿಭಾಗದಲ್ಲಿ ಲಭ್ಯ ಇರುವ ಮಾಹಿತಿಯಂತೆ 2024ರ ಏಪ್ರಿಲ್ ರಿಂದ 20...