Madikeri, ಫೆಬ್ರವರಿ 11 -- ಮಡಿಕೇರಿ: ಕಚೇರಿಯಲ್ಲಿ ಕುಳಿತಾಗ ಇಲ್ಲವೇ ವಾಹನದಲ್ಲಿ ಸಂಚರಿಸುವಾಗ ಅಥವಾ ಚಟುವಟಿಕೆ ಮಾಡುವಾಗ ಹಠಾತ್‌ ಸಾವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೊಡಗಿನಲ್ಲೂ ಇಂತಹದ್ದೇ ಪ್ರಕರಣ ಮಂಗಳವಾರ ನಡೆದಿದೆ. ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಜೆ.ಬಿ.ಶ್ರೀಧರಮೂರ್ತಿ (59) ಅವರು ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಇಲಾಖೆಯ ಮಡಿಕೇರಿಯಲ್ಲಿರುವ ಕಛೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರು ಕಚೇರಿಗೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದಾಗ ಏಕಾಏಕಿ ನಿಯಂತ್ರಣ ಕಳೆದುಕೊಂಡು ಅಲ್ಲಿಯೇ ಕುಸಿತು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಮೃತಪಟ್ಟಿರುವುದು ಕಂಡು ಬಂದಿದೆ. ದಿಢೀರ್‌ ಆದ ಈ ಘಟನೆಯಿಂದ ಕಚೇರಿಯಲ್ಲಿನ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದು ಕಂಡು ಬಂದಿತು.

ಮಂಗಳವಾರ ಬೆಳಿಗ್ಗೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಗೆ ಆಗಮಿಸಿದ ಶ್ರೀಧರಮೂರ್ತಿ ಅವರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಆಗನೇ ಹಠಾತ್ತಾ...