Kodagu, ಮಾರ್ಚ್ 22 -- ಮಡಿಕೇರಿ: ವಾಹನ ಸವಾರರು ಎಷ್ಟು ಎಚ್ಚರದಿಂದ ವಾಹನ ಓಡಿಸಿದರೂ ಕಡಿಮೆಯೇ. ಏಕೆಂದರೆ ಈಗ ಪೊಲೀಸ್‌ ತಪಾಸಣೆ ಚುರುಕುಗೊಂಡಿದೆ. ಪೊಲೀಸರ ಜತೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಾಹನವನ್ನು ಓಡಿಸುವವರ ಮೇಲೆ ನಿಗಾ ಇಡುವ ವ್ಯವಸ್ಥೆ ಬಂದಿದೆ. ಇದಲ್ಲದೇ ಬೇಕಾಬಿಟ್ಟಿ ವಾಹನ ಓಡಿಸುವವರಿಗೆ ಈಗ ದಂಡ ಪ್ರಮಾಣವೂ ಮೂರ್ನಾಲ್ಕು ಪಟ್ಟು ಹೆಚ್ಚಿದೆ. ಒಮ್ಮೆ ಹೀಗೆ ಏನಾದರೂ ಸಿಲುಕಿಕೊಂಡರೆ ಭಾರೀ ಪ್ರಮಾಣದಲ್ಲಿಯೇ ದಂಡ ತೆರಬೇಕಾಗುತ್ತದೆ. ಇಂತಹದ್ದೇ ಘಟನೆಯೊಂದು ಕೊಡಗಿನ ಸೋಮವಾರಪೇಟೆ ಪಟ್ಟಣದಲ್ಲಿ ವರದಿಯಾಗಿದೆ. ಹುಡುಗಿಯರನ್ನು ಪದೇ ಪದೇ ಚುಡಾಯಿಸುವುದೂ ಅಲ್ಲದೇ ನಿರಂತರವಾಗಿ ಸಂಚಾರ ನಿಯಮ ಉಲ್ಲಂಘಿಸಿದ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿರದ ಬೈಕ್ ಸವಾರನೊಬ್ಬನಿಗೆ ಸೋಮವಾರಪೇಟೆ ಪೊಲೀಸರು ಬರೋಬ್ಬರಿ ರೂ. 18500 ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಸೋಮವಾರಪೇಟೆ ಜೂನಿಯರ್ ಕಾಲೇಜು ಮತ್ತು ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ ವ್ಯಾಪ್ತಿಯಲ್ಲಿ ಬೈಕ್ ಸವಾರನೊಬ್ಬ ಬೈಕ್ ನಲ್ಲಿ ವೀಲಿಂಗ್ ಮಾಡುತ್ತಾ ವಿದ್ಯ...