Kodagu, ಮಾರ್ಚ್ 28 -- Kodagu Crime:ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕು ಬೇಗೂರು ಕೊಳತೋಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದವರನ್ನು ಕಾಫಿ ತೋಟದ ಮನೆಯಲ್ಲಿ ವಾಸವಿದ್ದ ಕಾರ್ಮಿಕರಾದ ಕರಿಯ (75), ಗೌರಿ (70). ಅವರ ಮೊಮ್ಮಗಳು ನಾಗಿ (35) ಹಾಗೂ ನಾಗಿ ಪುತ್ರಿ ಕಾವೇರಿ(6 ) ಎಂದು ಗುರುತಿಸಲಾಗಿದೆ. ಆರೋಪಿ ಗಿರೀಶ್‌ ಜತೆಗೆ ನಾಗಿ ವಿವಾಹವಾಗಿತ್ತು. ಅವರದ್ದೇ ಕುಟುಂಬದ ವ್ಯಕ್ತಿ ಗಿರೀಶ್‌ ಎಂಬಾತ ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿರುವುದು ತನಿಖೆಯ ವೇಳೆ ಬಯಲಾಗಿದೆ. ಕೊಡಗಿನಲ್ಲಿ ತಲ್ಲಣ ಮೂಡಿಸಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಆರು ಗಂಟೆಯಲ್ಲೇ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳದಲ್ಲಿ ಅಡಗಿಕೊಂಡಿದ್ದ ಗಿರೀಶ್‌ನನ್ನು ಶುಕ್ರವಾರ ರಾತ್ರಿ ಬಂಧಿಸಿ ಕರೆ ತರಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಡಿಐಜಿಪಿ ಡಾ.ಬೋರಲಿಂಗಯ್ಯ, ಕೊಡಗು ಎಸ್ಪಿ ರಾಮರಾಜನ್‌ ಹಾಗೂ ಹಿರಿಯ...