Bangalore, ಏಪ್ರಿಲ್ 1 -- ಕಷ್ಟದಲ್ಲಿರುವವರಿಗೆ ನೆರವು ನೀಡಲು ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಸದಾ ತುಡಿಯುತ್ತಾರೆ. ತಮ್ಮ ಕೈಲಾದಷ್ಟು ಸುದೀಪ್‌ ಸಹಾಯ ಮಾಡುತ್ತಾರೆ. ಬಲಗೈನಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂದು ಇವರು ಸಹಾಯ ಮಾಡುತ್ತಾರೆ. ಆದರೆ, ಕೆಲವೊಮ್ಮೆ ಸಹಾಯ ಬಯಸುವ ಮೊತ್ತ ಅಗಾಧವಾಗಿರುತ್ತದೆ. ಇಂತಹ ಸಮಯದಲ್ಲಿ ಅಭಿಮಾನಿಗಳು ಮತ್ತು ಜನರ ನೆರವು ಕೇಳುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಮನವಿ ಮಾಡಿದರೆ ಅಭಿಮಾನಿಗಳು ಮತ್ತು ಮನವಿ ನೋಡಿದ ಜನರು ಸಹಾಯ ಮಾಡುತ್ತಾರೆ. ಕಷ್ಟದಲ್ಲಿರುವವರಿಗೆ ಒಂದೊಂದು ರೂಪಾಯಿ ನೀಡಿದರೂ ಅದು ಅಗಾಧ ಮೊತ್ತವಾಗುತ್ತದೆ. ಪ್ರತಿದಿನ ಖರ್ಚು ಮಾಡುವ ಮೊತ್ತದಲ್ಲಿ ಯಾರಿಗಾದರೂ ಕೆಲವು ನೂರು ರೂಪಾಯಿ ಸಹಾಯ ಮಾಡಿದರೂ ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ. ಕನ್ನಡ ನಟ ಸುದೀಪ್‌ ಇದೇ ರೀತಿ ಜನರಿಂದ ಒಂದು ಪುಟ್ಟ ಮಗುವಿಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಕಿಚ್ಚನ ಭಾವುಕ ಮನವಿಗೆ ಕರಗಿ ಸಾಕಷ್ಟು ಜನರು ಸಹಾಯಹಸ್ತ ನೀಡು...