ಭಾರತ, ಮಾರ್ಚ್ 23 -- ಯಶ್, ನಯನತಾರಾ ಸೇರಿದಂತೆ ಹಲವರು ನಟಿಸಿರುವ 'ಟಾಕ್ಸಿಕ್' ಸಿನಿಮಾ ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಈ ಚಿತ್ರದ ಮೂಲಕ ಕಿಯಾರಾ ಅಡ್ವಾನಿ ಕನ್ನಡ ಭಾಷೆಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಗೇಮ್ ಚೇಂಜರ್‌ ಸಿನಿಮಾದಲ್ಲಿ ಕಿಯಾರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಷ್ಟ ಅನುಭವಿಸಿತ್ತು. ಆ ಸಿನಿಮಾ ನಷ್ಟ ಅನುಭವಿಸಿದರೂ ಸಹ ಕಿಯಾರಾಗಿದ್ದ ಅವಕಾಶಗಳು ಮಾತ್ರ ಕಡಿಮೆ ಆಗಲಿಲ್ಲ. ಒಂದಾದಮೇಲೊಂದು ಅವಕಾಶವನ್ನು ಪಡೆದು, ಸಿನಿಮಾಗಳಲ್ಲಿ ಕಿಯಾರಾ ತಮ್ಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲೂ ಕಿಯಾರಾ ಮಿಂಚಲಿದ್ದಾರೆ. ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಅವರ ಮುಂಬರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

ಟಾಕ್ಸಿಕ್ ಸಿನಿಮಾಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಬಹುಕೋಟಿ ವೆಚ್ಚದಲ್ಲಿ ಟಾಕ್ಸಿಕ್‌ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಇದೇ ನಿರ್ಮಾಣ ಸಂಸ್ಥೆ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ ದೊಡ್ಡ ಸರ್ಪ್ರೈಸ...