Bangalore, ಮಾರ್ಚ್ 15 -- ಕೆಜಿಎಫ್‌ ಸಿನಿಮಾ ಮೂಲಕ ಕನ್ನಡಗರಿಗೆ ಪರಿಚಿತರಾದವರು ನಟ ಅವಿನಾಶ್‌ ಬಿ.ಎಸ್‌. ಯಾವುದೇ ನಟನೆಯ ಗಂಧ ಗಾಳಿ ಗೊತ್ತಿಲ್ಲದೆ, ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡು, ಇದೀಗ ಕನ್ನಡ ಮಾತ್ರವಲ್ಲದೆ, ಪರಭಾಷೆಯ ಸಿನಿಮಾಗಳಲ್ಲಿಯೂ ಮಿಂಚು ಹರಿಸುತ್ತಿದ್ದಾರೆ. ಮೂಲತಃ ಉದ್ಯಮಿಯಾಗಿರುವ ಅವಿನಾಶ್‌, ಇದೀಗ ಪರಭಾಷೆಗಳಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟ. ಅದರಲ್ಲೂ ಖಳನಟನಾಗಿಯೇ ಹೆಚ್ಚು ಶೈನ್‌ ಆಗುತ್ತಿದ್ದಾರೆ.

ಕೆಜಿಎಫ್‌ ಚಾಪ್ಟರ್‌ 1 ಮತ್ತು ಚಾಪ್ಟರ್‌ 2ರಲ್ಲಿ ಆಂಡ್ರಿವ್ಸ್‌ ಪಾತ್ರದ ಮೂಲಕವೇ ವೀಕ್ಷಕರಿಗೆ ಹತ್ತಿರವಾಗಿದ್ದರು ಅವಿನಾಶ್.‌ ಕೆಜಿಎಫ್‌ ಸರಣಿ ಸಿನಿಮಾಗಳು ಮುಗಿದ ಬಳಿಕ, ತೆಲುಗಿನಲ್ಲೂ ಆಫರ್‌ ಗಿಟ್ಟಿಸಿಕೊಂಡರು. ನಂದಮೂರಿ ಬಾಲಕೃಷ್ಣ ಅವರ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಖಳನ ಪಾತ್ರದಲ್ಲಿ ತಮ್ಮ ಗತ್ತು ಪ್ರದರ್ಶಿಸಿದರು. ಅದಾದ ಮೇಲೆ 2023ರಲ್ಲಿ ಚಿರಂಜೀವಿ ಅವರ ಜೊತೆಗೆ ವಾಲ್ತೇರ್‌ ವೀರಯ್ಯ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಇದೀಗ ಸಾಲು ಸಾಲು ತೆಲುಗು, ...