ಭಾರತ, ಫೆಬ್ರವರಿ 1 -- ನವಗ್ರಹಗಳಲ್ಲಿ ಕೇತು ಒಂದು ಅಶುಭ ಗ್ರಹ. ಈ ಗ್ರಹವು ಪ್ರತಿ 18 ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಿಸುತ್ತದೆ. ಶನಿಯ ನಂತರ ಕೇತು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಜ್ಯೋತಿಷ್ಯದ ಪ್ರಕಾರ, ಕೇತು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನಪಲ್ಲಟ ಮಾಡುವಾಗ ಅದು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ.

ರಾಹು ಹಾಗೂ ಕೇತು ಗ್ರಹಗಳು ಹಿಮ್ಮುಖವಾಗಿ ಚಲಿಸುತ್ತವೆ. ಈ ಎರಡೂ ಗ್ರಹಗಳು ಬೇರೆ ಬೇರೆಯಾಗಿ ಸಂಚರಿಸಿದರೂ ಅವುಗಳ ಕೆಲಸ ಒಂದೇ. ಇದೀಗ ಕೇತುವಿನ ರಾಶಿ ಬದಲಾವಣೆ ನಡೆಯಲಿದೆ.

ಕೇತುವು ಅಕ್ಟೋಬರ್ 2023ರ ಕೊನೆಯಲ್ಲಿ ಕನ್ಯಾರಾಶಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಮೇ 2025ಕ್ಕೆ ಕೇತು ಸಿಂಹ ರಾಶಿಗೆ ಸ್ಥಾನ ಬದಲಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ, ಸಿಂಹ ರಾಶಿಯಲ್ಲಿ ಕೇತುವಿನ ಸಂಚಾರವು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಆದಾಗ್ಯೂ, ಕೆಲವು ರಾಶಿಚಕ್ರದ ಜನರಿಗೆ ಇದರಿಂದ ವಿಶೇಷ ಯೋಗಗಳು ಒಲಿಯುತ್ತವೆ ಎಂದು ಊಹಿಸಲಾಗಿದೆ. ಹಾಗಾದರೆ ಕೇತು ಸಂಚಾರದಿಂದ ಯಾ...