ಭಾರತ, ಮಾರ್ಚ್ 25 -- ನಟ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿದೆ. ಧರ್ಮ ಪ್ರೊಡಕ್ಷನ್ಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ನಿಮಿಷ ಮೂವತ್ತೊಂಬತ್ತು ಸೆಕೆಂಡುಗಳ ಟೀಸರ್‍‌ಅನ್ನು ಹಂಚಿಕೊಂಡಿದೆ. ಅಮೃತಸರದಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಮಯದಲ್ಲಿ ಮಹಿಳೆಯರು ಮತ್ತು ಪುರುಷರು ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಓಡಿಹೋಗುವಾಗ ಕಿರುಚುತ್ತಿರುವ ಆಡಿಯೊದೊಂದಿಗೆ ಈ ಟೀಸರ್ ಆರಂಭವಾಗುತ್ತದೆ. ಟೀಸರ್ ವಿಡಿಯೋದಲ್ಲಿ 1919ರಲ್ಲಿ ಗೋಲ್ಡನ್ ಟೆಂಪಲ್ ಅನ್ನು ತೋರಿಸಲಾಗಿದೆ. ಜಲಿಯನ್ ವಾಲಾ ಬಾಗ್ ನಲ್ಲಿ ಒಟ್ಟುಗೂಡಿದ ಜನರನ್ನು ಬ್ರಿಟಿಷರು ಹೇಗೆ ಕೊಂದರು ಎಂಬುದರ ಕುರಿತು ಒಂದು ಧ್ವನಿಮುದ್ರಿಕೆ ಇದೆ. ಚಿತ್ರದಲ್ಲಿ, ಬ್ರಿಟಿಷ್ ನ್ಯಾಯಾಧೀಶರು ಅಧ್ಯಕ್ಷತೆ ವಹಿಸುವ ನ್ಯಾಯಾಲಯದಲ್ಲಿ ಅಕ್ಷಯ್ ವಕೀಲರಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯೋಗರಾಜ್‌ ಭಟ್ಟರ ʻಮನದ ಕಡಲುʼ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹವಾ, ಎಲ್ಲೆಲ್ಲೂ ಜನಸಾಗರ PHOTOS

ಅಕ್ಷಯ್ ಕುಮಾರ್ ವ...