Bengaluru, ಏಪ್ರಿಲ್ 4 -- ಈ ಬಾರಿ ನೀವು ಕೇರಳಕ್ಕೆ ಪ್ರವಾಸ ಹೋಗಲು ನಿರ್ಧರಿಸಿದ್ದೀರಾ? ಬೇಸಿಗೆ ರಜೆಯಲ್ಲಿ ಟೂರ್ ಹೋಗಲು ಈ ಸಮಯ ಸೂಕ್ತ. ಹೊಸ ಪ್ರದೇಶಕ್ಕೆ ಪ್ರವಾಸ ಹೋಗುವುದರಿಂದ ಮನಸ್ಸು ಕೂಡ ಉಲ್ಲಾಸವಾಗುತ್ತದೆ. ಕೇರಳದಲ್ಲಿ ಬಜೆಟ್ ದರಕ್ಕೆ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಅಲ್ಲಿನ ಸಾರಿಗೆ ಸಂಸ್ಥೆ ನಿರ್ವಹಿಸುತ್ತಿದೆ. ಕೇರಳದಲ್ಲಿ ಕೆಎಸ್‌ಆರ್‌ಟಿಸಿ ಹಮ್ಮಿಕೊಂಡಿರುವ ಬಜೆಟ್ ಪ್ರವಾಸೋದ್ಯಮ ಯಶಸ್ವಿಯಾಗಿ ನಡೆಯುತ್ತಿದೆ. ಬೇಸಿಗೆ ರಜೆ ಬಂದೇ ಬಿಟ್ಟಿದೆ. ಕೇರಳದ ರಮಣೀಯ ಸೌಂದರ್ಯ, ಪರಂಪರೆ ಮತ್ತು ಸಂಸ್ಕೃತಿಯನ್ನು ಅನ್ವೇಷಿಸಲು ನೀವು ಯೋಜಿಸಿದ್ದರೆ, ಇಲ್ಲಿದೆ ಹೆಚ್ಚಿನ ಮಾಹಿತಿ. ಕೆಎಸ್‌ಆರ್‌ಟಿಸಿಯ ಬಜೆಟ್ ಪ್ರವಾಸೋದ್ಯಮ ಆಯ್ಕೆಮಾಡಿಕೊಂಡರೆ ಏನೆಲ್ಲಾ ಪ್ರಯೋಜನಗಳಿವೆ? ಮುಂದೆ ಓದಿ.

ಕೇರಳದ ಒಟ್ಟು 93 ಕೆಎಸ್‌ಆರ್‌ಟಿಸಿ ಡಿಪೋಗಳಲ್ಲಿ 90 ಡಿಪೋಗಳು ಈಗ 1,500 ಟೂರ್ ಪ್ಯಾಕೇಜ್‌ಗಳನ್ನು ನಿರ್ವಹಿಸುತ್ತಿದ್ದು, ಬಜೆಟ್ ಕೊರತೆಯಿಂದ ಬಳಲುತ್ತಿರುವ ಕೆಎಸ್‌ಆರ್‌ಟಿಸಿಗೆ ಇದು ಉತ್ತಮ ಆದಾಯವನ್ನು ತರುತ್ತಿದೆ. ಕೆಎಸ್‌ಆರ್‌ಟಿ...