ಭಾರತ, ಮಾರ್ಚ್ 27 -- ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ನಾಯಕನಾಗಿ ನಟಿಸಲಿರುವ ರೌಡಿ ಜನಾರ್ದನ್‌ ಚಿತ್ರಕ್ಕೆ ನಾಯಕಿ ಯಾರು? ಈ ಪ್ರಶ್ನೆಗೀಗ ಉತ್ತರವೊಂದು ಸಿಕ್ಕಿದೆ. ಕೀರ್ತಿ ಸುರೇಶ್ ಈ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಇದೆ.

ಮಹಾನಟಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಸಾವಿತ್ರಿಯಾಗಿ, ವಿಜಯ್ ದೇವರಕೊಂಡ ಮತ್ತು ಸಮಂತಾ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದರು.

ಕೀರ್ತಿ ಸುರೇಶ್ ಕೊನೆಯದಾಗಿ ತೆಲುಗಿನಲ್ಲಿ 'ಭೋಲಾ ಶಂಕರ್' ಚಿತ್ರದಲ್ಲಿ ನಟಿಸಿದ್ದರು. ಸುಮಾರು ಎರಡು ವರ್ಷಗಳ ಬಳಿಕ 'ರೌಡಿ ಜನಾರ್ದನ್' ಚಿತ್ರದ ಮೂಲಕ ಟಾಲಿವುಡ್‌ಗೆ ಮರಳುತ್ತಿದ್ದಾರೆ ಕೀರ್ತಿ.

ಇತ್ತೀಚೆಗೆ 'ಬೇಬಿ ಜಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಮರು ಪ್ರವೇಶ ಪಡೆದಿದ್ದರು. ತೇರಿ ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರ ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ.

ಸದ್ಯ ರಿವಾಲ್ವರ್‌ ರೀಟಾ, ಕನ್ನಿವೇಡಿ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ...