ಭಾರತ, ಮಾರ್ಚ್ 12 -- ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ, ಕತ್ರಿನಾ ಕೈಫ್ ಆಗಮಿಸಿ, ಸರ್ಪಸಂಸ್ಕಾರ ಸಹಿತ ವಿವಿಧ ಸೇವೆಗಳಲ್ಲಿ ಭಾಗಿಯಾದರು. ತಮಿಳು ಚಿತ್ರರಂಗದ ನಿರ್ದೇಶಕರೊಬ್ಬರ ಸೂಚನೆಯಂತೆ ಕತ್ರಿನಾ ಅವರಿಂದ ಮಾಹಿತಿ ಪಡೆದು, ಬಂದಿದ್ದಾರೆ. ಖಾಸಗಿ ವಸತಿಗೃಹದಿಂದ ನೇರವಾಗಿ ದೇವಸ್ಥಾನಕ್ಕೆ ಬಂದ ವೇಳೆ ಮಾಸ್ಕ್ ಹಾಕಿ, ತಲೆಗೆ ದುಪಟ್ಟಾ ಹಾಕಿದ್ದರು. ಮಾಧ್ಯಮದವರಿಂದ ಅಂತರ ಕಾಯ್ದುಕೊಂಡರು.

ಕತ್ರಿನಾ ಪತಿ ಜತೆಗೆ ಬರುವವರಿದ್ದರು. ಆದರೆ ಕೊನೇ ಕ್ಷಣದಲ್ಲಿ ಬರಲಾಗಲಿಲ್ಲ. ಆಶ್ಲೇಷ ನಕ್ಷತ್ರದಂದೇ ಸೇವೆ ನೆರವೇರಿಸುವ ಹಿನ್ನೆಲೆಯಲ್ಲಿ ಕತ್ರಿನಾ ಮಾತ್ರವೇ ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿದ್ದರು.

ಸುಬ್ರಹ್ಮಣ್ಯ ದೇವಸ್ಥಾನದ ಸರ್ಪಸಂಸ್ಕಾರ ನಡೆಯುವ ಸ್ಥಳದಲ್ಲಿ ಅವರು ಪೂಜೆ ಸಲ್ಲಿಸಿರುವುದು ಕಂಡುಬಂತು. ಸಂತಾನ ಪ್ರಾಪ್ತಿ, ವೃತ್ತಿ ಜೀವನ ಹಾಗೂ ಕುಟುಂಬದ ಹಿತಕ್ಕಾಗಿ ಕತ್ರಿನಾ ಸರ್ಪಸಂಸ್ಕಾರ ಸೇವೆ ನೆರವೇರಿಸಿದ್ದಾಗಿ ತಿಳಿದುಬಂದಿದೆ. (ವಿಡಿಯೋದಿಂದ ತೆಗೆದ ಚಿತ್ರ)

ಮಕ್...