Bangalore, ಏಪ್ರಿಲ್ 3 -- KAS Posting: ಕರ್ನಾಟಕ ಸರ್ಕಾರದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯು 13 ಕೆಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಪ್ರಕರಣದಲ್ಲಿ ಕಾನೂನು ಸಮರ ಎದುರಿಸುತ್ತಿರುವ ಹಿರಿಯ ಕೆಎಎಸ್‌ ಅಧಿಕಾರಿ ಡಿ.ಬಿ.ನಟೇಶ್‌ ಅವರು ವರ್ಗಾವಣೆಗೊಂಡಿದ್ದಾರೆ. ಇದಲ್ಲದೇ ವಿಜಯಪುರ ಜಿಲ್ಲೆ ಇಂಡಿ ಉಪವಿಭಾಗ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ಉಪವಿಭಾಗಕ್ಕೆ ಹೊಸ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚಿಕ್ಕಮಗಳೂರು ಉಪವಿಭಾಗಾಧಿಕಾರಿಯನ್ನು ಕುಂದಾಪುರಕ್ಕೆ ವರ್ಗ ಮಾಡಿದ್ದರಿಂದ ಆ ಹುದ್ದೆ ಖಾಲಿಯೇ ಉಳಿದಿದೆ. ಇದಲ್ಲದೇ ದಾವಣಗೆರೆ, ಬಾಗಲಕೋಟೆ ಸಹಿತ ವಿವಿಧ ಜಿಲ್ಲಾಪಂಚಾಯಿತಿಗಳಲ್ಲಿನ ಕೆಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ.

ಹಿರಿಯ ಕೆಎಎಸ್‌ ಅಧಿಕಾರಿ, ಹುದ್ದೆ ನಿರೀಕ್ಷೆಯಲ್ಲಿದ್ದ ಸೈಯದ್‌ ಆಯೀಷಾ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ದಂಡಾಧಿಕಾರಿ ಹುದ್ದೆಗೆ ವರ್ಗ ಮಾಡಲಾಗಿದೆ. ಅಪರ ಜಿಲ್ಲಾಧ...