ಭಾರತ, ಫೆಬ್ರವರಿ 13 -- ಹುಬ್ಬಳ್ಳಿ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಏಳೂರ ಒಡೆಯ ಯಲಗೂರೇಶನ ಕಾರ್ತಿಕೋತ್ಸವ ಫೆ 15 ರಿಂದ 17ರ ತನಕ ನಡೆಯಲಿದೆ. ತನ್ನಿಮಿತ್ತವಾಗಿ ನಾನಾ ಸಾಮಾಜಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಫೆ. 15 ರಿಂದ ಮೂರು ದಿನ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಸುಕ್ಷೇತ್ರ ಏಳೂರ ಒಡೆಯ ಯಲಗೂರೇಶನ ಕಾರ್ತಿಕೋತ್ಸವ ನಿಮಿತ್ತ ಫೆಬ್ರವರಿ 15 ರಂದು ಅಭಿಷೇಕ, ಮಹಾನೈವೇದ್ಯ, ದಿಂಡಿನ ಸ್ಪರ್ಧೆ, ಅನ್ನಸಂತರ್ಪಣೆ, ಅಂದು ರಾತ್ರಿ ಹರಿದಾಸರ ಕೀರ್ತನೆ ಹಾಗೂ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಫೆಬ್ರವರಿ 16 ರಂದು ಹರಶಾವಿಗೆ ನಡೆಯಲಿದೆ.ಅದೇ ದಿನ ಸಂಜೆ ೫ ಕ್ಕೆ ರಥೋತ್ಸವ ಜರುಗಲಿದೆ. ರಾತ್ರಿ ೮ಕ್ಕೆ ಹೊಂಡದ ಪೂಜೆ, ರಾತ್ರಿ 10.30 ಕ್ಕೆ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಬಸವೇಶ್ವರ ನಾಟ್ಯ ಸಂಘದಿಂದ 'ಅಕ್ಕ ಅಪರಂಜಿ ತಂಗಿ ಗುಲಗಂಜಿ' ನಾಟಕ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 17 ರಂದು ಸಂಜೆ 4 ಕ್ಕೆ ಸುಪ್ರಸಿದ್ದ ಜಂಗೀ ಕುಸ್ತಿಗಳು ಅದೇ ದಿನ ರಾತ್ರಿ 10.3...