ಭಾರತ, ಜನವರಿ 28 -- Karnataka Weather: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮುಂಜಾನೆಯ ಸಮಯದಲ್ಲಿ ಮೈಕೊರೆಯುವ ಚಳಿಯ ಜೊತೆಗೆ ದಟ್ಟ ಮಂಜಿನ ಪರಿಸ್ಥಿತಿ ಇದ್ದು, ಈ ವಾತಾವರಣ ಇಂದು (ಜನವರಿ 28, ಮಂಗಳವಾರ) ಕೂಡ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಮತ್ತು ಮಂಜು ಆವರಿಸಿದೆ. ದಟ್ಟ ಮಂಜಿನಿಂದ ಮಂದ ಬೆಳಕಿನ ಸಮಸ್ಯೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ. ನಿನ್ನೆ (ಜನವರಿ 27, ಸೋಮವಾರ) ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ. ಒಣ ಹವೆ ಮುಂದುವರಿದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ಇಂದಿನಿಂದ (ಜವನರಿ 28, ಮಂಗಳವಾರ) ಜನವರಿ 31ರ ಶುಕ್ರವಾರದ ವರೆಗೆ 4 ದಿನಗಳ ಕಾಲ ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ. ಆದರೆ ...
Click here to read full article from source
To read the full article or to get the complete feed from this publication, please
Contact Us.