Bangalore, ಫೆಬ್ರವರಿ 11 -- Karnataka Weather: ಕರ್ನಾಟಕದ ಬಹುತೇಕ ಎಲ್ಲಾ ಕಡೆಗಳಲ್ಲಿ ಎರಡು ವಾರಗಳಿಂದ ಬಿಸಿಲ ವಾತಾವರಣ ಬಿರುಸುಗೊಳ್ಳತೊಡಗಿದೆ. ಉತ್ತರ, ಮಧ್ಯ, ಕರಾವಳಿ ಕರ್ನಾಟಕದ ಜತೆಗೆ ಬೆಂಗಳೂರು ಹಾಗೂ ಹಳೆ ಮೈಸೂರು ಭಾಗದಲ್ಲಿ ನಿಧಾನವಾಗಿ ಬಿಸಿಲ ಕಾವು ಏರತೊಡಗಿದೆ. ಇದರ ನಡುವೆ ಬೆಳಗಿನ ವೇಳೆ ಹಲವು ಕಡೆ ಚಳಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದರೂ ಮೂರ್ನಾಲ್ಕು ದಿನದಿಂದ ಕೆಲವು ಜಿಲ್ಲೆಗಳ ಕನಿಷ್ಠ ಉಷ್ಣಾಂಶದಲ್ಲಿ ದಿಢೀರ್‌ ಕುಸಿತ ಕಂಡಿದೆ. ಮಂಗಳವಾರ ಬೆಳಿಗ್ಗೆಯೂ ದಟ್ಟ ಚಳಿಯ ಅನುಭವ ಆಯಿತು. ಮಧ್ಯ ಕರ್ನಾಟಕದ ದಾವಣಗೆರೆ, ಮಲೆನಾಡು ಭಾಗದ ಹಾಸನ, ಚಿಕ್ಕಮಗಳೂರು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳಗ್ಗಿನ ಹೊತ್ತಿನಲ್ಲಿ ಚಳಿಯನ್ನು ಜನ ಅನುಭವಿಸಿದರು. ಆನಂತರ ನಿಧಾನವಾಗಿ ಬಿಸಿಲ ಪ್ರಮಾಣ ಏರಲಿದೆ. ಬೆಂಗಳೂರಿನಲ್ಲೂ ಭಾರೀ ಬಿಸಿಲ ವಾತಾವರಣವಂತೂ ಇಲ್ಲ. ಬೆಳಿಗ್ಗೆ ಚಳಿಯಂತೂ ಇತ್ತು.

ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಂಗಳವಾರವೂ ಒಣ ಹವೆ ಇರುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ದಟ್ಟವಾ...