Kalaburgi, ಮಾರ್ಚ್ 15 -- Karnataka weather:ಕರ್ನಾಟಕದ ಹಲವು ಭಾಗದಲ್ಲಿ ಮಾರ್ಚ್‌ ಮೂರನೇ ವಾರದ ಹೊತ್ತಿಗೆ ಬಿಸಿಲ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಎನ್ನಿಸಿರುವ ಕಲಬುರಗಿಯಲ್ಲಿ ಸತತ ಒಂದೂವರೆ ತಿಂಗಳಿನಿಂದ ಗರಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಇದೆ. ಅದು ಕಲಬುರಗಿಯಲ್ಲಿ ಶುಕ್ರವಾರದಂದು ಗರಿಷ್ಠ ಉಷ್ಣಾಂಶದ ಪ್ರಮಾಣ 40.2 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ವಿಜಯಪುರ, ಗದಗ ಭಾಗದಲ್ಲೂ ಬಿಸಿಲಿನ ಪ್ರಮಾಣ ಅಧಿಕವಾಗಿದೆ. ಕರಾವಳಿ ಭಾಗದಲ್ಲೂ ಕೂಡ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡಿದೆಯಲ್ಲದೇ ಮುಂದಿನ ಮೂರ್ನಾಲ್ಕು ದಿನ ಬಿಸಿಲಿ ಗಾಳಿಯ ಮುನ್ಸೂಚನೆಯನ್ನೂ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ. ಇದರೊಟ್ಟಿಗೆ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲದಲ್ಲಿ ಬಿಸಿಲು ಕೊಂಚ ಹೆಚ್ಚೇ ಇರಲಿದೆ ಎಂದು ತಿಳಿಸಲಾಗಿದೆ.ನೈಜ ಸಮಯದ ಮಾಹಿತಿಯ ಆಧಾರದ ಮೇಲೆ ಗರಿಷ್ಠ ತಾಪಮಾನವು ಕರಾವಳಿ ಕರ್ನಾಟಕದ ವ್ಯಾಪ್ತಿಯಲ್ಲಿ 34 ರಿಂದ 35 ಡಿಗ...