Bengaluru,ಬೆಂಗಳೂರು, ಜನವರಿ 20 -- ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳು, ಮೈಸೂರು, ಚಾಮರಾಜನಗರ, ಮಂಡ್ಯ ಮುಂತಾದ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ ಇರಲಿದೆ. ಅದೇ ರೀತಿ ಮೈ ನಡುಗಿಸುವ ಚಳಿಯ ಅನುಭವ ಹಲವೆಡೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನಾ ವರದಿ ಹೇಳಿದೆ.

ಚಳಿಗಾಲದ ಕಾರಣ ಕರ್ನಾಟಕದ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಹಜವಾಗಿಯೇ ಬೆಳಗ್ಗೆ ತನಕ ಮಂಜುಮುಸುಕಿದ ವಾತಾವರಣ, ಮೈ ನಡುಗಿಸುವ ಚಳಿಯ ಅನುಭವವಾದೀತು. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು (ಜ.20) ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ವಿವಿಧ ಜಿಲ್ಲೆಗಳಲ್ಲಿ ಬಹುತೇಕ ಕಡೆ ಚಳಿ ತೀವ್ರವಾಗಿರಲಿದೆ. ಹಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ.

ಇದನ್ನೂ ಓದಿ| ಬರೋಬ್ಬರಿ 27 ಮಿಲಿಯನ್ ಡಾಲರ್ ಪಿತ್ರಾರ್ಜಿತ ಸಂಪತ್ತು ದಾನಕ್ಕೆ ಮುಂದಾದ್ರು 31 ವರ್ಷದ ಆಸ್ಟ್ರೋ ಜರ್ಮನ್‌ ಯುವತಿ, ಕಾರಣ ಇಲ್ಲಿದೆ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್...