ಭಾರತ, ಮಾರ್ಚ್ 3 -- ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆಯ ಬಿಸಿಯ ಅನುಭವ ಶುರುವಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಮನೆಯ ಹೊರಗೆ ಬಿಸಿಲಿನ ಬಿಸಿಗೆ ಜನರಿಗೆ ಕೆಂಡದಂಥಾ ಅನುಭವವಾದರೆ, ಮನೆಯೊಳಗೂ ಸೆಕೆ ಸೆಕೆ ಎನ್ನುವಂತಾಗಿದೆ. ಚಳಿ ಬಹುತೇಕ ಮಾಯವಾಗಿದ್ದು, ಇಂದು ಕೂಡಾ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಉಷ್ಣ ಅಲೆಗಳ ಎಚ್ಚರಿಕೆ ನೀಡಿದ್ದು, ಮನೆಯ ಹೊರಗಡೆ ಓಡಾಡುವಾಗ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ. ಕರಾವಳಿ ಕರ್ನಾಟಕ ಮತು ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಹೇಳಿದೆ.

ಭಾನುವಾರ (ಮಾ. 02) ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಿತ್ತು. ಅದರಂತೆಯೂ ಇಂದು ಕೂಡಾ (ಮಾ.03) ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಷ್ಣಅಲೆಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ನಾಳೆ (ಮಾ. 04, ಮಂಗಳವಾರ) ಬಿಸಿ...