ಭಾರತ, ಮಾರ್ಚ್ 7 -- ಬೆಂಗಳೂರು: ಕರ್ನಾಟಕದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಸೆಕೆಗೆ ಜನರು ಹೈರಾಣಾಗಿದ್ದಾರೆ. ಕರಾವಳಿ ಜಿಲ್ಲೆಗಳ ಜನರು ತಾಪಮಾನ ಏರಿಕೆಯಿಂದ ಕಂಗಾಲಾಗಿದ್ದು ಒಂದೆಡೆಯಾದರ, ಸದಾ ತಂಪಾಗಿರುವ ನಗರ ಬೆಂಗಳೂರಿನ ಜನ ಕೂಡಾ ಹವಾಮಾನ ಬದಲಾವಣೆಯಿತ್ತ ನಿಧಾನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಒಣಹವೆ ಇರಲಿದ್ದು, ಮಾರ್ಚ್ 12ರವರೆಗೂ ಒಣಹವೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಸೆಕೆಯೂ ಹೆಚ್ಚುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಹವೆ ಹೆಚ್ಚಾಗುವ ಅಲರ್ಟ್ ನೀಡಿದೆ.

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿಅತಿ ಹೆಚ್ಚು ಉಣ್ಣಾಂಶವು 37.8 ಡಿ. ಸೆಲ್ಸಿಯಸ್‌ ಕಲಬುರಗಿಯಲ್ಲಿ ದಾಖಲಾಗಿದೆ. ಅತಿ ಕಡಿಮ ಉಷ್ಣಾಂಶವು 16.7 ಡಿ. ಸೆಲ್ಸಿಯಸ್ ಚಾಮರಾಜನಗರದ ಸ್ವಯಂ ಚಾಲಿತ ಸ್ಟೇಶನ್‌ನಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತ...