Bangalore, ಫೆಬ್ರವರಿ 12 -- Karnataka Weather: ಫೆಬ್ರವರಿ ತಿಂಗಳ ಎರಡನೇ ವಾರದ ಹೊತ್ತಿಗೆ ಉತ್ತರ ಕರ್ನಾಟಕದ ಜತೆಯಲ್ಲಿ ಕರಾವಳಿ ಭಾಗದಲ್ಲೂ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಏರಿಕೆಯಾಗುತ್ತಿದೆ. ಇದರಿಂದ ಬಿಸಿಲ ಪ್ರಮಾಣದಲ್ಲಿ ಗಣನೀಯವಾಗಿಯೇ ಏರಿಕೆ ಕಂಡು ಬರುತ್ತಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ನಡುವೆಯೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿಸಿಲಿನ ಕಾವೇರಿ ಹೆಚ್ಚುತ್ತಿದೆ. ಮಂಗಳವಾರದಂದು ಈ ಅನುಭವ ಆಗಿದೆ. ಅದೇ ರೀತಿ ಮಲೆನಾಡಿನ ಆಗುಂಬೆಯಲ್ಲೂ ಕೂಡ ಬಿಸಿಲು ಹೆಚ್ಚಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾತ್ರ ಬೆಳಗಿನ ಹೊತ್ತಿನಲ್ಲಿ ತಣ್ಣನೆಯ ವಾತಾವರಣ ಮುಂದುವರಿದಿದ್ದರೆ, ಮಧ್ಯಾಹ್ನದ ಹೊತ್ತಿಗೆ ಸಾಧಾರಣ ಉಷ್ಣಾಂಶವೇ ಕಂಡು ಬರುತ್ತಿದೆ.

Published by HT Digital Content Services with permission from HT Kannada....