ಭಾರತ, ಮಾರ್ಚ್ 4 -- ಬೆಂಗಳೂರು: ಕರ್ನಾಟಕದ ಹವಾಮಾನದಲ್ಲಿ ಕಳೆದ ಕೆಲವು ದಿನಗಳಿಂದ ದೊಡ್ಡ ಬದಲಾವಣೆ ಇಲ್ಲ. ಎಲ್ಲೆಡೆ ತಾಪಮಾನ ಏರಿಕೆಯೇ ಪ್ರಮುಖ ಅಂಶ. ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ತಾಪಮಾನದಲ್ಲಿ ವ್ಯತ್ಯಾಸವಿದೆ. ಕರಾವಳಿ ಕರ್ನಾಟಕದಲ್ಲಿ ಉಷ್ಣ ಅಲೆಯಿಂದಾಗಿ ದಿನದ ಎಲ್ಲಾ ಸಮಯದಲ್ಲಿ ಬಿಸಿ ವಾತಾವರಣವಿದೆ. ಸೆಕೆಯಿಂದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅತ್ತ ಮಲೆನಾಡು ಹಾಗೂ ಬೆಂಗಳೂರು ನಗರದ ಸುತ್ತಮುತ್ತ, ಮುಂಜಾನೆ ಭಾರಿ ಚಳಿ ಇದ್ದರೆ, ಮಧ್ಯಾಹ್ನವಾಗುತ್ತಿದ್ದಂತೆ ಸೆಕೆಯಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಅತ್ತ ಉತ್ತರ ಕರ್ನಾಟಕದಲ್ಲೂ ಒಣಹವೆ ಮುಂದುವರೆದಿದೆ.

ಕುಂದಾ ನಗರಿ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ರಾಜ್ಯದಲ್ಲಿಯೇ ಕಡಿಮೆ ಎಂಬಂತೆ 16.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಾರವಾರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶ 23.0 ಡಿಗ್ರಿ ಸೆಲ್ಸಿ...