ಭಾರತ, ಫೆಬ್ರವರಿ 15 -- Karnataka UGCET-25: ಕರ್ನಾಟಕ ಸಿಇಟಿ 2025ಕ್ಕೆ ನೋಂದಣಿ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಇದ್ದ ಕೊನೇ ದಿನಾಂಕವನ್ನು ಫೆ 24ರ ತನಕ ವಿಸ್ತರಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಘೋಷಿಸಿದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸುವುದಕ್ಕೆ ಫೆ 2 ಕೊನೇ ದಿನವಾಗಿತ್ತು. ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಈಗಾಗಲೇ ಅರ್ಜಿ ಸಲ್ಲಿಸಿರುವವರು, ತಮ್ಮ ಅರ್ಜಿಗಳಲ್ಲಿ ಏನಾದರು ತಿದ್ದುಪಡಿಗಳು ಇದ್ದರೂ ಈಗ ಸರಿ‌ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 16 ಮತ್ತು 17 ರಂದು ನಡೆಸುವುದಾಗಿ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಅದರಂತೆ, ಅರ್ಜಿ ಸಲ್ಲಿಸುವುದಕ್ಕೆ ಹಾಗೂ ಆನ್‌ಲೈನ್ ಮೂಲಕ ಶುಲ್ಕ ಪಾವತಿಸುವುದಕ್ಕೆ ಫೆ 2 ಕೊನೇ ದಿನಾಂಕ ಎಂದಿತ್ತು. ಈಗ, ಸಿಇಟಿ-2025ಕ್ಕೆ ಇಲ್ಲಿಯವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಹಾಗು ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಆನ್‌ಲೈನ್ ಮೂಲಕ ನೋಂದಣಿ ಮಾಡಿ ಅರ್ಜ...