ಭಾರತ, ಮಾರ್ಚ್ 17 -- Karnataka UGCET-25: ಕರ್ನಾಟಕ ಯುಜಿ ಸಿಇಟಿ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೆ ಪರಿಷ್ಕರಿಸಿದ್ದು, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷಾ ದಿನಾಂಕವನ್ನು ಬದಲಾಯಿಸಿದೆ. ಉಳಿದಂತೆ ಸಿಇಟಿ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದೇ ನಡೆಯಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

"UGCET-25 ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆಯನ್ನು ಏ.18ರ ಬದಲಾಗಿ ಏ.15ರಂದೇ ನಡೆಸಲಾಗುವುದು. ಉಳಿದಂತೆ ಸಿಇಟಿ ಪರೀಕ್ಷೆ ಏ.16 & 17ರಂದು ನಡೆಯಲಿದೆ. ಇದರಲ್ಲಿ ಯಾವ ಬದಲಾವಣೆ ಇರುವುದಿಲ್ಲ. ಸದ್ಯದಲ್ಲೇ ಪ್ರವೇಶ ಪತ್ರ ಡೌನ್‌ಲೋಡ್‌ಗೂ ಅವಕಾಶ ನೀಡಲಾಗುವುದು." ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು (ಮಾರ್ಚ್‌ 17) ಪ್ರಕಟಣೆ ಹೊರಡಿಸಿದೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಏಪ್ರಿಲ್ 15 ರಂದು ಬೆಳಿಗ್ಗೆ 10.30ರಿಂದ ಪೂರ್ವಾಹ್ನ 11.30ರ ತನಕ 4ನೇ ...