Bangalore, ಮಾರ್ಚ್ 28 -- Karnataka Tiger Estimation: ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ 2024 ರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ವರದಿ ಪ್ರಕಾರ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಂತೂ ಆಗಿಲ್ಲ. ಕೊಂಚ ಕಡಿಮೆ ಎನ್ನಿಸಿದರೂ ಹುಲಿಗಳ ಪ್ರಮಾಣದಲ್ಲಿ ಸ್ಥಿರತೆಯಂತೂ ಕಂಡು ಬಂದಿದೆ. ಕರ್ನಾಟಕ ಅರಣ್ಯ ಇಲಾಖೆ, ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಥಾಪಿಸಿರುವ ಕರ್ನಾಟಕ ವನ್ಯಜೀವಿ ತಾಂತ್ರಿಕ ಘಟಕದ ಮೂಲಕ ಈ ಸಮೀಕ್ಷೆಯ ಮಾಹಿತಿಯನ್ನು ವಿಶ್ಲೇಷಿಸಿ, "ಕರ್ನಾಟಕ - 2024 ಹುಲಿಗಳ, ಸಸ್ಯಾಹಾರಿ ಹಾಗೂ ಇತರ ಪ್ರಾಣಿಗಳ ವಾರ್ಷಿಕ ವರದಿ" ಪ್ರಕಟಿಸಿದೆ. ಈ ವರದಿಯನ್ನು ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA)ದ ಮಾರ್ಗಸೂಚಿಗಳ ಪ್ರಕಾರ, ಅಖಿಲ ಭಾರತ ಹುಲಿ ಗಣತಿಯ (AITE) ಭಾಗವಾಗಿ, ಎಲ್ಲಾ ರಾಜ್ಯಗಳ ಹುಲಿ ಆವಾಸಸ್ಥಾನ ಪ್ರದೇಶಗಳಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಹುಲಿ, ಆನೆ, ಇತರೆ ಬೇಟೆ ...