Bangalore, ಮಾರ್ಚ್ 28 -- ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ. ಬಂಡೀಪುರ, ಬಿಆರ್‌ಟಿ, ಭದ್ರಾ ಹಾಗೂ ಅಣಶಿಯಲ್ಲಿ ನಡೆಸಲಾದ ಹುಲಿಗಳ ಸಮೀಕ್ಷೆ 2024 ರ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಹುಲಿಗಳ ಸಮೀಕ್ಷೆ 2024 ರ ವರದಿ ಪ್ರಕಾರ ಐದು ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಏರಿಕೆಯಂತೂ ಆಗಿಲ್ಲ. ಸಂಖ್ಯೆಗಳು ಕೊಂಚ ಕಡಿಮೆ ಎನ್ನಿಸಿದರೂ ಹುಲಿಗಳ ಪ್ರಮಾಣದಲ್ಲಿ ಸ್ಥಿರತೆ ಕಂಡು ಬಂದಿದೆ.

2014ರಲ್ಲಿ ಕೈಗೊಂಡಿದ್ದ ಹುಲಿ ಗಣತಿಯಲ್ಲಿ 578 ಕ್ಯಾಮರಾ ಸ್ಥಳಗಳಲ್ಲಿ 226 ಹುಲಿಗಳ ಚಿತ್ರ ಸೆರೆ ಹಿಡಿಯಲಾಗಿತ್ತು. ಆಗ 261 ಹುಲಿಗಳ ಇರುವಿಕೆಯ ಅಂದಾಜು ಮಾಡಲಾಗಿತ್ತು.

2018ರಲ್ಲಿ ನಡೆಸಿದ್ದ ಗಣತಿಯಲ್ಲಿ 1776 ಕ್ಯಾಮರಾ ಸ್ಥಳಗಳಲ್ಲಿ 332 ಹುಲಿಗಳ ಚಿತ್ರ ಸೆರೆ ಹಿಡಿಯಲಾಗಿತ್ತು. ಆಗ 472 ಹುಲಿಗಳ ಇರುವಿಕೆಯ ಅಂದಾಜು ಮಾಡಲಾಗಿತ್ತು.

2020 ರಲ್ಲಿ ಕೈಗೊಳ್ಳಲಾಗಿದ್ದ ಹುಲಿ ಗಣತಿಯಲ್ಲಿ 1818 ಕ್ಯಾಮರಾ ಸ್ಥಳಗಳಲ್ಲಿ 365 ಹುಲಿಗಳ ಚಿತ್ರ ಸೆರೆ ಹಿಡಿಯಲಾಗಿತ್ತು. ಆಗ 403 ಹುಲಿಗಳ ಇರುವಿಕೆಯ ಅಂದಾಜು ಮಾಡಲ...