Mysuru, ಮಾರ್ಚ್ 11 -- ಮೈಸೂರಿನಲ್ಲಿ ಬೇಸಿಗೆ ಆರಂಭದಲ್ಲೇ ಸುಡು ಬಿಸಿಲು. ಹೆಚ್ಚಾಗಿದೆ ಮೈಸೂರಿನ‌ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಬೇಸಿಗೆ ಬಿಸಿ ತಟ್ಟಿದೆ.

ಪ್ರಾಣಿಪಕ್ಷಿಗಳಿಗೆ ತಂಪಾದ ವಾತಾವರಣ ನಿರ್ಮಿಸಲು ಮುಂದಾದ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ. ಜೆಟ್ ಸ್ಪ್ರಿಂಕ್ಲರ್ ಮೂಲಕ ಕೃತಕ ಮಳೆ ಸುರಿಸಿ ತಂಪಾದ ವಾತಾವರಣ ಮಾಡುವ ಯತ್ನ ನಡೆಸಿದ್ದಾರೆ.

ಹುಲಿ, ಸಿಂಹ, ಕರಡಿ, ಆನೆ, ಗೊರಿಲ್ಲಾಗಳಿಗ ಮೈ ಮೇಲೆ ನೀರು ಬೀಳುವಂತೆ ವ್ಯವಸ್ಥೆ ಮಾಡಲಾಗಿದದು, ಬಿರು ಬಿಸಿಲಿನಿಂದ ಮೃಗಾಲಯದ ಗಾರ್ಡನ್ ಒಣಗದಂತೆ ನಿಗಾ ವಹಿಸಲಾಗಿದೆ.

ಮೈಸೂರು ಮೃಗಾಲಯದ ಆವರಣದ ತುಂಬ ಸುಮಾರು 45 ಕಡೆ ಸ್ಪ್ರಿಂಕ್ಲರ್ ಅಳವಡಿಕೆ ಮಾಡಲಾಗಿದೆ. ಸುಮಾರು 50 ರಿಂದ 100 ಮೀಟರ್ ಗಳಷ್ಟು ದೂರಕ್ಕೆ ಚಿಮ್ಮುವ ಸ್ಪ್ರಿಂಕ್ಲರ್ ಗಳು ಈಗಾಗಲೇ ನೀರು ಹರಿಸುತ್ತಿವೆ.

ಬೇಸಿಗೆಯ ವೇಳೆ ದೇಹ ತಂಪಾಗಿಸಲು ಗೊರಿಲ್ಲ, ಚಿಂಪಾಜಿ, ಕೋತಿಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ಕಲ್ಲಂಗಡಿ, ಐಸ್ ಬ್ಲಾಗ್, ಹಣ್ಣು ಹಂಪಲುಗಳ ವಿತರಣೆ ಮಾಡಲಾಗುತ್ತಿದೆ.

ಕರಡ...