Bangalore, ಮಾರ್ಚ್ 1 -- Karnataka Summer 2025: ಕರ್ನಾಟಕದಲ್ಲಿ ಫೆಬ್ರವರಿಯಲ್ಲಿ ಕೊನೆ ವಾರದಲ್ಲಿಯೇ ಬಿಸಿಲಿನ ಪ್ರಮಾಣ ಹೆಚ್ಚೇ ಇತ್ತು. ಇದರಿಂದ ಮುಂದಿನ ಮೂರು ತಿಂಗಳು ಬಿಸಿಲಿನ ವಾತಾವರಣ ಹೇಗಿರಬಹುದು ಎನ್ನುವ ಯೋಚನೆ ಇದ್ದೇ ಇರುತ್ತದೆ. ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವ 2025ರ ಬೇಸಿಗೆ ಋತುಮಾನ (ಮಾರ್ಚ್ -ಮೇ) ಮುನ್ನೋಟ ಹಾಗೂ 2025 ರ ಮಾರ್ಚ್ ಮಾಹೆಯ ಮಳೆಯ ಮತ್ತು ತಾಪಮಾನ ಮುನ್ಸೂಚನೆಯ ವಿವರವನ್ನು ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಘಟಕವು ಭಾರತೀಯ ಹವಾಮಾನ ಇಲಾಖೆಯ ಮಾಹಿತಿಗಳನ್ನು ಆಧರಿಸಿ ಬಿಡುಗಡೆ ಮಾಡಿದೆ. ಇದರಲ್ಲಿ ಗರಿಷ್ಠ ತಾಪಮಾನ, ಕನಿಷ್ಠ ತಾಪಮಾನ, ಬಿಸಿಗಾಳಿ ದಿನಗಳ ಮಾಹಿತಿಯನ್ನು ನೀಡಲಾಗಿದೆ. ಮಾರ್ಚ್‌ ತಿಂಗಳು ಹಾಗೂ ಮಾರ್ಚ್‌ನಿಂದ ಮೇ ವರೆಗಿನ ಬೇಸಿಗೆ ಮಾಹಿತಿ ಒದಗಿಸಲಾಗಿದೆ.

ಮಾರ್ಚ್‌ನಿಂದ ಮೇವರೆಗೆ ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಹಾಗೂ ಕರಾವಳಿ ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಸಾಧ್ಯತೆಗಳಿವೆ. ಆದರೆ, ದಕ್ಷಿಣ ಒಳನಾಡು ಜಿಲ್ಲೆ...