Dakshina Kannada, ಮಾರ್ಚ್ 29 -- Karnataka SSLC Exam 2025: ಈ ಬಾರಿ ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ಪರೀಕ್ಷೆ ಶನಿವಾರ ನಡೆದಿದ್ದು ಈ ಪರೀಕ್ಷೆಯು ಸುಲಭವಾಗಿದೆ ಎಂದು ಕರಾವಳಿ ಭಾಗದ ಜಿಲ್ಲೆಗಳ ಬಹಳಷ್ಟು ವಿದ್ಯಾರ್ಥಿಗಳು ಸಂತಸಪಟ್ಟಿದ್ದಾರೆ. ಕನ್ನಡ ಹೊರತುಪಡಿಸಿದರೆ ಉಳಿದೆಲ್ಲ ಪರೀಕ್ಷೆಗಳು ಸುಲಭವಾಗಿರುವುದು ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅದರಲ್ಲೂ ಯುಗಾದಿ ಹಬ್ಬದ ನಡುವೆಯೇ ಪರೀಕ್ಷೆ ಬಂದಿದ್ದು. ಇದರ ಮಧ್ಯೆಯೇ ವಿದ್ಯಾರ್ಥಿಗಳು ಸಿದ್ದತೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳು ನಿರೀಕ್ಷೆ ಮಾಡಿದಂತೆಯೇ ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಬಂದಿದೆ. ಕೆಲವು ಸುಲಭದ ಪ್ರಶ್ನೆಗಳನ್ನು ನೋಡಿ ಖುಷಿಗೊಂಡ ವಿದ್ಯಾರ್ಥಿಗಳು ಅದೇ ಉಮೇದಿನಲ್ಲಿ ಉತ್ತರ ಬರೆದಿದ್ದಾರೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕ ಪಡೆಯುವ ವಿಶ್ವಾಸ ಹಲವರಲ್ಲಿ ಮೂಡಿದೆ. ಮುಂದಿನ ಎರಡು ವಿಷಯಗಳಿಗೆ ವಿದ್ಯಾರ್ಥಿಗಳು ತಯಾರಿ ಆರಂಭಿಸಿದ್ದಾರೆ.
ಈ ಬಾರಿಯ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.