Bangalore, ಏಪ್ರಿಲ್ 4 -- Karnataka SSLC Exam 2025: ಕರ್ನಾಟಕದಲ್ಲಿ ಮೂರು ವಾರದಿಂದ ನಡೆಯುತ್ತಿರುವ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕೊನೆ ದಿನ ಶುಕ್ರವಾರ. ಈಗಾಗಲೇ ಐದು ವಿಷಯಗಳ ಪರೀಕ್ಷೆಗಳು ಸುಸೂತ್ರವಾಗಿ ಮುಕ್ತಾಯಗೊಂಡಿದ್ದು, ಕೊನೆಯ ವಿಷಯದ ಪರೀಕ್ಷೆಗಳು ಶುಕ್ರವಾರ ನಡೆಯಲಿವೆ. ಈಗಾಗಲೇ ಪ್ರಥಮ ಭಾಷೆ ಕನ್ನಡ, ಗಣಿತ, ದ್ವಿತೀಯ ಭಾಷೆ ಇಂಗ್ಲೀಷ್‌, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯಗಳ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಮುಗಿಸಿದೆ. ಈಗ ತೃತೀಯ ಭಾಷೆಯ ವಿಷಯದ ಪರೀಕ್ಷೆಗಳು ಕರ್ನಾಟಕ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿವೆ. ಬಹುತೇಕ ಕಠಿಣ ಎನ್ನುವ ವಿಷಯಗಳ ಪರೀಕ್ಷೆ ಮುಗಿದಿದ್ದು, ವಿದ್ಯಾರ್ಥಿಗಳು ಕೊನೆ ವಿಷಯದ ಪರೀಕ್ಷೆ ಎದುರಿಸಲು ಅಣಿಯಾಗಿದ್ದಾರೆ.

ಏಪ್ರಿಲ್‌ 4ರ ಶುಕ್ರವಾರದಂದು ತೃತೀಯ ಭಾಷೆ ಪರೀಕ್ಷೆ ಇದೆ. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಿಂದಿ ವಿಷಯವನ್ನು ಬರೆಯಲಿದ್ದಾರೆ. ಕೆಲವರು ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತ...