Bangalore, ಮಾರ್ಚ್ 29 -- Karnataka SSLC Exam 2025: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನಾಲ್ಕನೇ ಪತ್ರಿಕೆ ಶನಿವಾರ ಮುಕ್ತಾಯವಾಗಿದೆ. ಯುಗಾದಿ ಹಬ್ಬ ಆಚರಿಸಲು ಅಣಿಯಾಗುತ್ತಿರುವ ವಿದ್ಯಾರ್ಥಿಗಳು ಹಬ್ಬದ ಮುನ್ನಾ ದಿನದಂದು ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಎದುರಿಸಿದ್ದಾರೆ. ಕನ್ನಡ, ಗಣಿತ ಹಾಗೂ ಇಂಗ್ಲೀಷ್‌ ಭಾಷೆಯ ನಂತರ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಶನಿವಾರ ಇತ್ತು. ಕರ್ನಾಟಕದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಮಕ್ಕಳು ಎದುರಿಸಿದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಈ ಬಾರಿ ಸುಲಭವಾಗಿಯೇ ಇತ್ತು. ಎರಡು ಹಾಗೂ ಮೂರು ಅಂಕದ ತಲಾ ಒಂದೊಂದು ಪ್ರಶ್ನೆಯನ್ನು ಕೇಳುವ ರೀತಿಯಲ್ಲಿ ಗೊಂದಲ ಮಾಡಿದ್ದರಿಂದ ಕೆಲ ವಿದ್ಯಾರ್ಥಿಗಳು ಸಮರ್ಪಕವಾಗಿ ಉತ್ತರ ನೀಡಿಲ್ಲ. ಅದನ್ನು ಬಿಟ್ಟರೆ ನಿರೀಕ್ಷೆಯಂತೆಯೇ ಪ್ರಶ್ನೆಗಳು ಬಂದಿದ್ದರಿಂದ ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಎದುರಿಸಿದ್ದು ಉತ್ತಮ ಅಂಕ ಬರುವ ವಿಶ್ವಾಸದಲ್ಲಿದ್ದಾರೆ.

Published by HT Digital Content Ser...