Bangalore, ಏಪ್ರಿಲ್ 2 -- Karnataka SSLC Exam 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಐದನೇ ವಿಷಯವಾಗಿ ವಿಜ್ಞಾನದ ಪರೀಕ್ಷೆಯೂ ಮುಗಿದಿದೆ. ಗಣಿತ ಹಾಗೂ ಇಂಗ್ಲೀಷ್‌ ಜತೆಗೆ ಮಕ್ಕಳಿಗೆ ಕಠಿಣ ವಿಷಯಗಳಲ್ಲಿ ವಿಜ್ಞಾನ ಕೂಡ ಒಂದು. ಕಳೆದ ವರ್ಷ ಹೆಚ್ಚೇ ಗೊಂದಲಮಯವಾಗಿ ಪ್ರಶ್ನೆ ಪತ್ರಿಕೆ ಇದ್ದುದರಿಂದ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ಆಗಿರಲಿಲ್ಲ. ಈ ಬಾರಿ ಹಾಗಿಲ್ಲ. ವಿಜ್ಞಾನ ಪ್ರಶ್ನೆ ಪತ್ರಿಕೆ ಸರಳವಾಗಿದ್ದರಿಂದ ವಿದ್ಯಾರ್ಥಿಗಳು ಖುಷಿಯಾಗಿ ಉತ್ತರ ಬರೆದು ನಗು ಮುಖದಿಂದಲೇ ಪರೀಕ್ಷಾ ಕೇಂದ್ರದಿಂದ ಹೊರ ಬಂದಿದ್ದಾರೆ. ವಿಜ್ಞಾನ ಪ್ರಶ್ನೆ ಪತ್ರಿಕೆಯ ಭೌತಶಾಸ್ತ್ರದ ವಿಷಯದಲ್ಲಿ ಎರಡು ಪ್ರಶ್ನೆಗಳನ್ನು ಮಾತ್ರ ಗೊಂದಲಕಾರಿಯಾಗಿ ನೀಡಿದ್ದರೂ ಅದನ್ನೂ ಕೂಡ ವಿದ್ಯಾರ್ಥಿಗಳು ಎದುರಿಸಿದ್ದಾರೆ. ಉಳಿದಂತೆ ಉಳಿಕೆ ಪ್ರಶ್ನೆಗಳು ನೇರವಾಗಿ ಹಾಗೂ ವಿದ್ಯಾರ್ಥಿ ಸ್ನೇಹಿಯಾಗಿಯೇ ರೂಪಿಸಲಾಗಿದೆ.

Published by HT Digital Content Services with permission from HT Kannada....