Bangalore, ಏಪ್ರಿಲ್ 1 -- Karnataka SSLC Exam 2025: ಎಸ್‌ಎಸ್‌ಎಲ್‌ಸಿ ಹಂತದಲ್ಲಿ ವಿದ್ಯಾರ್ಥಿಗಳನ್ನು ಕೊಂಚ ಕಾಡುವ ವಿಷಯದಲ್ಲಿ ವಿಜ್ಞಾನ ಕೂಡ ಒಂದು. ಗಣಿತ, ಇಂಗ್ಲೀಷ್‌ ಜತೆಯಲ್ಲಿ ವಿಜ್ಞಾನದ ವಿಷಯದ ಪರೀಕ್ಷೆ ಎದುರಿಸುವಾಗ ವಿದ್ಯಾರ್ಥಿಗಳು ಕೊಂಚ ಗಲಿಬಿಲಿಗೊಳ್ಳುವುದು ಸಹಜವೇ. ಏಕೆಂದರೆ ವಿಜ್ಞಾನ ಎನ್ನುವುದು ಪ್ರಯೋಗಗಳ ವಿಷಯ. ಅದರಲ್ಲಿ ಸಂಕೀರ್ಣ ವಿಚಾರಗಳೂ ಅಡಗಿವೆ. ನಮ್ಮ ನಿತ್ಯದ ಬದುಕಿನೊಂದಿಗೆ ಹಾಸು ಹೊಕ್ಕಾಗಿರುವ ವಿಜ್ಞಾನವನ್ನು ಆಸಕ್ತಿ ಜತೆಗೆ ಕುತೂಹಲದಿಂದ ತಿಳಿದುಕೊಂಡರೆ ಸುಲಭವೇ. ಇಲ್ಲದೇ ಇದ್ದರೆ ಮಕ್ಕಳಲ್ಲಿ ಗೊಂದಲ ಮೂಡಿಸುತ್ತದೆ. ಮುಖ್ಯವಾಗಿ ಪರೀಕ್ಷೆ ವೇಳೆಯಲ್ಲೂಂತೂ ಇಂತಹ ಗೊಂದಲ ಹೆಚ್ಚಲೂ ಬಹುದು. ಆದರೆ ತರಗತಿಯಲ್ಲಿ ಶಿಕ್ಷಕರು ಹೇಳಿಕೊಟ್ಟಿರುವ ರೀತಿಯಲ್ಲಿಯೇ ಕೊನೆ ದಿನದಂದು ತಯಾರಿ ಮಾಡಿಕೊಂಡರೆ ಅಂಕವನ್ನು ಹೆಚ್ಚಿಸಿಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿಗೆ ವಿಜ್ಞಾನ ವಿಷಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರಲ್ಲೂ ಪರೀಕ್ಷೆಗೆ ಮೂರು ಭಾಗಗಳನ್ನಾಗಿ ರೂಪಿಸಿ ಪ್ರಶ್ನೆ ಕೇಳಲಾಗುತ್ತದೆ....