ಭಾರತ, ಮಾರ್ಚ್ 24 -- Karnataka SSLC Exam: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ (10ನೇ ತರಗತಿ ಬೋರ್ಡ್ ಪರೀಕ್ಷೆ) ಆರಂಭವಾಗಿದ್ದು ಇಂದು (ಮಾರ್ಚ್ 24) ಗಣಿತ ಪರೀಕ್ಷೆ ಇತ್ತು. ಗಣಿತ ಸಾಮಾನ್ಯವಾಗಿ ಕಷ್ಟದ ವಿಷಯ ಎನ್ನುವ ಕಾರಣಕ್ಕೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಒಂದಿಷ್ಟು ಆತಂಕ ಇರುವುದು ಸಹಜ. ಆದರೆ ಈ ವರ್ಷ ಗಣಿತ ಪ್ರಶ್ನೆಪತ್ರಿಕೆ ಸುಲಭವಿದ್ದು, ಪರೀಕ್ಷೆ ಸುಲಭವಾಯ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಬರೆದ ವಿದ್ಯಾರ್ಥಿಗಳು. ಶಿಕ್ಷಕರು ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರೀಕ್ಷೆ ಸುಲಭ ಇತ್ತು ಎಂದು ಹೇಳುತ್ತಾರೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಗಣಿತ ಪರೀಕ್ಷೆಯ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ನಂಗೆ ಗಣಿತ ಪರೀಕ್ಷೆ ಸುಲಭ ಇತ್ತು. 1 ಅಂಕ, 2 ಅಂಕ ಹಾಗೂ 3 ಅಂಕ ಪ್ರಶ್ನೆಗಳೆಲ್ಲಾ ತುಂಬಾನೇ ಸುಲಭ ಇದ್ದವು. ಆದರೆ 4 ಅಂಕದ ಪ್ರಶ್ನೆಗಳಲ್ಲಿ ಕೆಲವು ಗೊಂದಲ ಮೂ...
Click here to read full article from source
To read the full article or to get the complete feed from this publication, please
Contact Us.