ಭಾರತ, ಜನವರಿ 30 -- ಮಹಾ ಶಿವರಾತ್ರಿಗೆ ಇನ್ನ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷ ಚತುರ್ದಶಿಯ ದಿನದಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಶಿವನ ಆರಾಧನೆಗೆ ಸಕಲ ರೀತಿಯಲ್ಲಿ ಸಿದ್ಧತೆಗಳು ನಡೆಯುತ್ತವೆ. ದೇವಸ್ಥಾನಕ್ಕೆ ಹೋಗಿ ಶಿವರಾತ್ರಿ ಆಚರಿಸಲು ಸಾಧ್ಯವಾಗದೆ ಇರುವವರು ಮನೆಯಲ್ಲೇ ಶಿವನಿಗೆ ಪೂಜೆ ಮಾಡುವ ಮೂಲಕ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿರುವ 112 ಅಡಿ ಎತ್ತರದ ಅದಿಯೋಗಿ ಶಿವನ ಪ್ರತಿಮೆಗೆ ಇತ್ತೀಚೆಗೆ ತುಂಬಾ ಜನಪ್ರಿಯತೆಯನ್ನು ಗಳಿಸಿದ್ದು, ಶಿವರಾತ್ರಿಯಂದು ಇಲ್ಲಿ ಇಡೀ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಕರ್ನಾಟಕದಲ್ಲಿ ಇರುವ ಜನಪ್ರಿಯ ಶಿವನ ದೇವಾಲಯಗಳ ಬಗ್ಗೆ ಇಲ್ಲಿ ತಿಳಿಯೋಣ.

ಹಿಂದೂ ಧರ್ಮದಲ್ಲಿ ಶಿವನನ್ನು ಸರ್ವೋಚ್ಛ ಶಕ್ತಿ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಪುರಾತನ ಕಾಲದ ನೂರಾರು ಸಣ್ಣ ಹಾಗೂ ದೊಡ್ಡ ಶಿವನ ದೇವಾಲಯಗಳಿವೆ. ಹೊಯ್ಸಳ ವಾಸ್ತು ಶಿಲ್ಪವನ್ನು ಹೊಂದ...