Bangalore, ಮಾರ್ಚ್ 10 -- Karnataka Reservoirs Level: ಕರ್ನಾಟಕದಲ್ಲಿ ಮಾರ್ಚ್‌ ಎರಡನೇ ವಾರದ ಹೊತ್ತಿಗೆ ಬೇಸಿಗೆ ಪ್ರಮಾಣ ಏರಿಕೆಯಾಗುತ್ತಲೇ ಇದೆ. ನೀರಿನ ಬೇಡಿಕೆ ಪ್ರಮಾಣವೂ ಹಲವು ಭಾಗಗಳಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದ ನಗರ, ಪಟ್ಟಣಗಳು ನೀರಿಗೆ ಅವಲಂಬಿತವಾಗಿರುವುದು ಜಲಾಶಯಗಳ ಮೇಲೆಯೆ.ಕರ್ನಾಟಕದಲ್ಲಿ ಪ್ರಮುಖ 14 ಜಲಾಶಯಗಳಿವೆ. ಉತ್ತರ ಕರ್ನಾಟಕದ ಕೃಷ್ಣಾ ಕಣಿವೆ, ಮಲೆನಾಡು ಹಾಗು ಬಯಲು ಸೀಮೆಯ ತುಂಗಭದ್ರಾ ಕಣಿವೆ, ಹಳೆ ಮೈಸೂರು ಭಾಗವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಆದರೂ ಬೇಸಿಗೆ ಮುಗಿಯುವವರೆಗೂ ನೀರಿನ ನಿರ್ವಹಣೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕದ ಜಲಾಶಯಗಳಲ್ಲಿ ಮಾರ್ಚ್‌ 10ರಂದು ಸಂಗ್ರಹವಿರುವ ನೀರಿನ ಪ್ರಮಾಣದ ವಿವರ ಇಲ್ಲಿದೆ

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ 895.62 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಇಂದು 436.07 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವ...