Bangalore, ಮಾರ್ಚ್ 14 -- Karnataka Reservoirs: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಪ್ರಮಾಣ ಏರಿಕೆಯಾಗುತ್ತಿರುವ ಕುಡಿಯುವ ನೀರಿನ ಬೇಡಿಕೆ ಹೆಚ್ಚಿದೆ. ಬೇಸಿಗೆ ಬೆಳೆಗೆ ಕೆಲವು ಭಾಗಗಳಲ್ಲಿ ನೀರು ಹರಿಸುವ ಚಟುವಟಿಕೆಯೂ ನಡೆದಿದೆ. ಇದರ ನಡುವೆಯು ಕರ್ನಾಟಕದ ಪ್ರಮುಖ ಹತ್ತು ಜಲಾಶಯಗಳಲ್ಲಿ ಈಗಲೂ ನೀರಿನ ಮಟ್ಟ ಶೇ. 50ಕ್ಕೂ ಹೆಚ್ಚೇ ಇದೆ. ನೀರಿನ ಸಂಗ್ರಹ ಚೆನ್ನಾಗಿ ಇರುವುದರಿಂದ ನೀರಿನ ಸಮರ್ಪಕ ನಿರ್ವಹಣೆಯನ್ನು ಬೇಸಿಗೆ ಮುಗಿಯುವವರೆಗೂ ಮಾಡುವ ವಿಶ್ವಾಸವನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆ ವಾಣಿವಿಲಾಸ ಸಾಗರ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ, ಮೈಸೂರು ಜಿಲ್ಲೆಯ ಕಬಿನಿ, ಚಿಕ್ಕಮಗಳೂರು ಜಿಲ್ಲೆಯ ಭದ್ರಾ, ಬೆಳಗಾವಿ ಜಿಲ್ಲೆಯ ಘಟಪ್ರಭಾ ಜಲಾಶಯದಲ್ಲಿ ನೀರಿನ ಸಂಗ್ರಹ ಚೆನ್ನಾಗಿಯೇ ಇದೆ.

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದಲ್ಲಿ ಗರಿಷ್ಠ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 33.01 ಟಿಎಂಸಿ ನೀರು ಸಂಗ್ರಹವಿದೆ. ಶೇ. 67ರಷ್ಟು ನೀರು ಜಲಾಶಯದಲ್...