Bangalore, ಮಾರ್ಚ್ 12 -- ಕರ್ನಾಟಕದ ಕೆಲವು ಜಲಾಶಯಗಳಿಂದ ಏಕಾಏಕಿ ನೀರು ಹರಿಸಿದ ಫಲವಾಗಿ ನೀರಿನ ಮಟ್ಟದಲ್ಲಿ ಗಣನೀಯ ಕುಸಿತ ಮಾರ್ಚ್‌ ತಿಂಗಳಲ್ಲಿಯೇ ಕಂಡು ಬಂದಿದೆ.

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 25.70 ಟಿಎಂಸಿ ನೀರು ಸಂಗ್ರಹವಿದೆ. ಶೇ.21 ರಷ್ಟು ನೀರು ಲಭ್ಯತೆಯಿದೆ. ಕಳೆದ ವರ್ಷ ಇದೇ ದಿನ 44.69 ಟಿಎಂಸಿ ನೀರು ಇತ್ತು. ಜಲಾಶಯದಲ್ಲಿ 512.35 ಅಡಿ ನೀರು ಸಂಗ್ರಹವಾಗಿದೆ.

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಗರಿಷ್ಠ 105.79 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 25.56 ಟಿಎಂಸಿ ನೀರು ಸಂಗ್ರಹವಿದೆ. ಶೇ. 24 ರಷ್ಟು ನೀರು ಲಭ್ಯತೆಯಿದೆ. ಕಳೆದ ವರ್ಷ ಇದೇ ದಿನ 7.21 ಟಿಎಂಸಿ ನೀರು ಇತ್ತು. ಜಲಾಶಯದಲ್ಲಿ 1602.94 ಅಡಿ ನೀರು ಸಂಗ್ರಹವಾಗಿದೆ

ಬೆಳಗಾವಿ ಜಿಲ್ಲೆಯ ಮಲಪ್ರಭಾ ಜಲಾಶಯದಲ್ಲಿ ಗರಿಷ್ಠ 37.73 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 16.02 ಟಿಎಂಸಿ ನೀರು ಸಂಗ್ರಹವಿದೆ. ಶೇ.42 ರಷ್ಟು ನೀರು ಲಭ್ಯ...