Bangalore, ಏಪ್ರಿಲ್ 4 -- Karnataka Rains:ಕರ್ನಾಟಕದಲ್ಲಿ ಮಾರ್ಚ್‌ ತಿಂಗಳು ಬಿರುಬಿಸಿಲಿನ ಅವಧಿ. ಇದರ ನಡುವೆಯೂ ಈ ಬಾರಿ ಬೇಸಿಗೆಯಲ್ಲಿ ಬಹಳಷ್ಟು ಜಿಲ್ಲೆಗಳಲ್ಲಿ ಉತ್ತಮ ಮಳೆಯೇ ಆಗಿದೆ. ಬೆಂಗಳೂರು, ಮೈಸೂರು,ಬೆಳಗಾವಿ ಸಹಿತ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ಬಿಡುಗಡೆ ಮಾಡಿದೆ. ಅದರಲ್ಲೂ ಮಾರ್ಚ್‌ ತಿಂಗಳಲ್ಲಿ ತೀವ್ರ ಬಿಸಿಲಿನ ದಿನಗಳನ್ನೇ ಹೆಚ್ಚು ಕಂಡ ಕಲಬುರಗಿ ಜಿಲ್ಲೆಯಲ್ಲೂ ಕೂಡ ಉತ್ತಮ ಮಳೆ ಸುರಿದಿದೆ. ಕರಾವಳಿ. ಮಲೆನಾಡು ಭಾಗದಲ್ಲೂ ಮಳೆ ಚೆನ್ನಾಗಿಯೇ ಆಗಿದೆ.ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಮೂರು ಜಿಲ್ಲೆಯಲ್ಲಿ ಮಳೆ ಪ್ರಮಾಣ ಚೆನ್ನಾಗಿದೆ. ಕರ್ನಾಟಕದ ತೀವ್ರ ಮಳೆ ಕೊರತೆ ಎದುರಿಸಿದ ಏಳು ಜಿಲ್ಲೆಗಳಿದ್ದರೆ, ಇನ್ನು ಐದು ಜಿಲ್ಲೆಗಳಲ್ಲಿ ಕೊರತೆ ಪ್ರಮಾಣ ಕಡಿಮೆ ಇದೆ. ಒಂದು ಜಿಲ್ಲೆಯಲ್ಲಿ ಮಾತ್ರ ವಾಡಿಕೆಯಷ್ಟು ಸಾಮಾನ್ಯ ಮಳೆಯಾಗಿದೆ.

Published by HT Digital Content Services with permission from HT Kannad...