Bangalore, ಮಾರ್ಚ್ 28 -- Karnataka Rains:ಕಳೆದ ಎರಡು ತಿಂಗಳಿನಿಂದ ಕರ್ನಾಟಕದ ಬಿಸಿಲ ಬೇಗೆ ಜೋರಿದೆ. ಇದರ ನಡುವೆಯೇ ಮಾರ್ಚ್‌ ತಿಂಗಳಲ್ಲಿ ಕೆಲವು ಭಾಗದಲ್ಲಿ ವಾಡಿಕೆ ಮಳೆ ಚೆನ್ನಾಗಿಯೇ ಆಗಿದೆ. ಕರ್ನಾಟಕದ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ ಬರದ ನಾಡು ಕೋಲಾರ, ಬಿರು ಬಿಸಿಲಿನ ಕಲಬುರಗಿ, ಮೈಸೂರು, ಚಾಮರಾಜನಗರ, ತುಮಕೂರು ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗದಗ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಕಂಡು ಬಂದಿದೆ. ಉತ್ತರ ಕನ್ನಡ, ಬೆಳಗಾವಿ. ರಾಮನಗರ, ಬೀದರ್‌ , ಕೊಡಗು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ, ಉಡುಪಿ, ಧಾರವಾಡ, ರಾಯಚೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆಯಲ್ಲಿ ಕೊರತೆ ಕಂಡು ಬಂದಿದೆ. ಚಿಕ್ಕಬಳ್ಳಾಫುರ. ದಾವಣಗೆರೆ, ಹಾವೇರಿ. ಬಾಗಲಕೋಟೆ ಜಿಲ್ಲೆಗಳಲ್ಲೂ ನಿರೀಕ್ಷಯಷ್ಟು ಮಳೆಯಾಗಿಲ್ಲ ...