Bangalore, ಮಾರ್ಚ್ 22 -- Karnataka Rains: ಒಂದು ಕಡೆ ಬಿರು ಬಿಸಿಲು, ಇನ್ನೊಂದು ಕಡೆ ಮಳೆಯ ವಾತಾವರಣ. ಕರ್ನಾಟಕದಲ್ಲಿ ಇನ್ನೇನು ಯುಗಾದಿ ಹಬ್ಬಕ್ಕೆ ಸ್ವಾಗತಿಸುತ್ತಿರುವ ನಡುವೆ ಸತತ ಒಂದು ವಾರ ಕಾಲ ಮಳೆ ಸುರಿಯಲಿದೆ. ಈಗಾಗಲೇ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬೇಸಿಗೆಯ ಮಳೆಯಾಗಿದೆ. ದಕ್ಷಿಣ ಕರ್ನಾಟಕ ಭಾಗ ಮಾತ್ರವಲ್ಲದೇ ಕರಾವಳಿ. ಮಲೆನಾಡು, ಬೆಂಗಳೂರು, ಹಳೆ ಮೈಸೂರು ಭಾಗದಲ್ಲೂ ಮಳೆಯಾಗಿದೆ. ಇದರ ನಡುವೆ ಶನಿವಾರದಂದೂ ಕರ್ನಾಟಕದ 21 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಗ್ರಾಮಾಂತರ ಭಾಗ, ಕಲಬುರಗಿ, ದಕ್ಷಿಣ ಕನ್ನಡ, ತುಮಕೂರು, ಹಾಸನ, ವಿಜಯನಗರ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.