Dakshina Kannada, ಮಾರ್ಚ್ 13 -- Karnataka Rains:ಕರ್ನಾಟಕದಲ್ಲಿ ಸತತ ಮೂರನೇ ದಿನವೂ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿ ಸುರಿದಿದ್ದ ಮಳೆ ಬುಧವಾರ ಹಲವು ಜಿಲ್ಲೆಗಳಿಗೆ ವಿಸ್ತರಣೆಯಾಯಿತು. ಅದರಲ್ಲೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲೂ ಮಳೆ ಸುರಿದಿದೆ. ಮಂಗಳೂರು ಮಹಾ ನಗರದಲ್ಲಿ ಬುಧವಾರ ಸಂಜೆಯಿಂದ ರಾತ್ರಿಯಾದರೂ ಮಳೆ ಮುಂದುವರಿದಿತ್ತು. ಕೊಡಗು. ಚಾಮರಾಜನಗರ, ಮಂಡ್ಯ, ತುಮಕೂರು, ಹಾಸನ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮಳೆಯಾದ ವರದಿಯಾಗಿದೆ. ಅದರಲ್ಲೂ ಬಿಸಿಲ ಬೇಗೆಯಿಂದ ಒಂದೂವರೆ ತಿಂಗಳಿನಿಂದ ಬಳಲಿದ್ದವರಿಗೆ ಮೊದಲ ಮಳೆಯು ಕೊಂಚ ನಿರಾಳತೆಯನ್ನು ತಂದಿತು. ಕೆಲವರು ಮಳೆಯ ಹನಿ, ಮಣ್ಣಿನ ವಾಸನೆಯಿಂದ ಪುಳಕಿತರಾಗಿದ್ದು ಅಲ್ಲಲ್ಲಿ ಕಂಡು ಬಂದಿತು.

ಮುಂದಿನ 3 ಗಂಟೆಗಳಲ್ಲಿ ಚಾಮರಾಜನಗರ ಮತ್ತು ದಕ್ಷಿಣ ಕನ್ನಡದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಬುಧವಾರ ಮಧ್ಯಾಹ್ನದ ಹೊತ್ತಿಗೆಯೇ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿತ್ತ...