Bangalore, ಮಾರ್ಚ್ 21 -- Karnataka Rains: ಕರ್ನಾಟಕದಲ್ಲಿ ಬಿಸಿಲ ಬೇಗೆಯ ನಡುವೆ ಮುಂದಿನ ಒಂದು ವಾರ ನಾನಾ ಭಾಗಗಳಲ್ಲಿ ಮಳೆಯಾಗುವ ಖುಷಿ ವಿಚಾರವಿದು. ಬಹುತೇಕ ಎರಡು ತಿಂಗಳಿನಿಂದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು, ಬೆಂಗಳೂರು ಸೇರಿದಂತೆ ಎಲ್ಲೆಡೆ ಬಿಸಿಲಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಜನ ಮಳೆ ನಿರೀಕ್ಷೆಯಲ್ಲಿರುವ ನಡುವೆ ಒಂದು ವಾರದಿಂದ ಕೊಡಗು, ಚಿಕ್ಕಮಗಳೂರು, ಮೈಸೂರು ಭಾಗದಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಈಗ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಒಂದು ವಾರದ ಅವಧಿಯಲ್ಲಿ ಲಘು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ನೀಡಿದೆ. ಇದರಿಂದ ಕಲಬುರಗಿ ಸೇರಿದಂತೆ ಹಲವು ಭಾಗದಲ್ಲಿ ಬಿಸಿಲಿನಿಂದ ಬಳಲಿರುವ ಜನರಿಗೆ ಕೊಂಚ ನಿರಾಳತೆಯನ್ನು ಮಳೆ ತರಬಹುದು. ಇದಲ್ಲದೇ ಕೊಡಗಿನಲ್ಲಿ ಗುಡುಗು ಸಹಿತ ಕೊಂಚ ಜೋರಾದ ಮಳೆಯೇ ಆಗಬಹುದು ಎನ್ನುವ ಸೂಚನೆಯಿದೆ.
ಶುಕ್ರವಾರದಂದು ಕೊಡಗು ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಗುಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.