Mysuru, ಏಪ್ರಿಲ್ 8 -- Karnataka Puc Results 2025: ದ್ವಿತೀಯ ಪಿಯುಸಿ ಶಿಕ್ಷಣ ಪಡೆದ ನಂತರ ಬದುಕು ರೂಪಿಸಿಕೊಳ್ಳಲು ವಿಭಿನ್ನ ಕೋರ್ಸ್‌ಗಳ ಹುಡುಕಾಟದಲ್ಲಿದ್ದೀರಾ. ಅದರಲ್ಲೂ ಈಗಿನ ಕಾಲಮಾನಕ್ಕೆ ಪೂರಕವಾಗಿ ಸಂವಹನ ಕ್ಷೇತ್ರದಲ್ಲೂ ನಿಮ್ಮನ್ನು ತೊಡಗಿಸಿಕೊಳ್ಳಲು ಬಯಸುವಿರಾ? ಇದಕ್ಕಾಗಿ ಮೈಸೂರಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆಯು( ಆಯಿಷ್‌) ಸಂವಹನಕ್ಕೆ ಸಂಬಂಧಿಸಿ ಬಿಎಸ್ಸಿ ಹಾಗೂ ಇತರೆ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ನೀಡಲಿದೆ. ಇಲ್ಲಿಯೇ ಉನ್ನತ ಶಿಕ್ಷಣಕ್ಕೂ ಅವಕಾಶವುಂಟು. ಸಂವಹನ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ವೃತ್ತಿಪರರಿಗೆ ಉತ್ತಮವಾದ ಉದ್ಯೋಗಾವಕಾಶಗಳು ಇವೆ. ಸಂವಹನ ಕ್ಷೇತ್ರದಲ್ಲಿ ಶಿಕ್ಷಣ ನೀಡುವ ಜತೆಗೆ ತಜ್ಞರನ್ನಾಗಿ ಆಯಿಷ್‌ ರೂಪಿಸಲಿದೆ. ಹೊಸ ಹಾದಿಯಲ್ಲಿ ಹೋಗಲು ಇದು ಅವಕಾಶ ಮಾಡಿಕೊಡಲಿದೆ

Published by HT Digital Content Services with permission from HT Kannada....