Bangalore, ಮಾರ್ಚ್ 3 -- Karnataka Politics: ಕರ್ನಾಟಕದಲ್ಲಿ ಆರೇಳು ತಿಂಗಳಿನಿಂದ ಸಿಎಂ ಬದಲಾವಣೆ ಚರ್ಚೆ ನಡೆದಿದೆ. ಅದು ಒಂದು ತಿಂಗಳಿನಿಂದ ಬಿರುಸುಗೊಂಡಿದೆ. ಸಿಎಂ ಸಿದ್ದರಾಮಯ್ಯ ಬದಲಾಗೋಲ್ಲ ಎಂದು ಅವರ ಬಣದವರು ಹೇಳಿಕೆ ನೀಡಿದರೆ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಣದವರು ಅವರು ಸಿಎಂ ಆಗಿಯೇ ತೀರುತ್ತಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಬಜೆಟ್‌ಗೆ ಸಿದ್ದವಾಗುತ್ತಿರುವ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಈಗ ಬಣ ರಾಜಕಾರಣ ಬಿರುಸುಗೊಂಡಿದೆ. ನಾಯಕರ ಹೇಳಿಕೆಗಳ ಸಾರ ಇಲ್ಲಿದೆ.

ಡಿಕೆ ಶಿವಕುಮಾರ್ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿಗಳಾಗುವ ಸಾಧ್ಯತೆ ಬಗ್ಗೆ ವೀರಪ್ಪ ಮೊಯಿಲಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ''ಈಗ ಮೊಯ್ಲಿಯೊಬ್ಬರು ಹೇಳುವುದು, ಅಥವಾ ಇನ್ನೊಬ್ಬರು ಹೇಳುವುದು ಮುಖ್ಯವಲ್ಲ. ಹೈಕಮಾಂಡ್​ ಹೇಳಿದಂತೆ ತೀರ್ಮಾನ ಮಾಡಲಾಗುವುದು. ಹೈಕಮಾಂಡ್​ ನಿರ್ದೇಶನದಂತೆ ಮುನ್ನಡೆಯುತ್ತೇನೆ.

ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾವುದೇ...